ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ರಾಜ್ಯ ಪ್ರವಾಸ ಮಾಡಲಿದ್ದು, ಸಂಚಲನ ಮೂಡಿಸಿದೆ.
ಫೈಟರ್ ಜೆಟ್ ಹಾರಿಸಿ ಚೀನಾದ ಬೇಹುಗಾರಿಕೆ ಬಲೂನ್ ಸ್ಫೋಟಿಸಿದ ಅಮೆರಿಕಾ!
ಫೆ.6ರಂದು ಕರ್ನಾಟಕಕ್ಕೆ ಮೋದಿ ಅವರು ಆಗಮಿಸುತ್ತಿದ್ದು, ಬೆಂಗಳೂರಿನಲ್ಲಿ ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಉದ್ಘಾಟಿಸಲಿದ್ದಾರೆ.
ಅಲ್ಲದೇ ಇ20 ಇಂಧನ ಲೋಕಾರ್ಪಣೆ, ಗ್ರೀನ್ ಮೊಬಿಲಿಟಿ ಸೇರಿದಂತೆ ಹಲವು ಕಾರ್ಯಕ್ರಮಗೆ ಚಾಲನೆ ನೀಡಲಿದ್ದಾರೆ.
ರ‍್ಯಾಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರ‍್ಯಾಲಿಯಲ್ಲಿ ಹೆಚ್ಚು ಜನರನ್ನು ಸೇರಿಸಲು ಕಸರತ್ತುಗಳು ಪ್ರಾರಂಭವಾಗಿದೆ.
ರ‍್ಯಾಲಿಯಲ್ಲಿ 1000-1,500 ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ಬೆಂಗಳೂರಿನ 6 ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣ ಇಲಾಖೆ ಮನವಿ ಮಾಡಿದೆ.
ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಉದ್ಯಮಿ ಗೌತಮ್ ಅದಾನಿ ಔಟ್!
ಸೋಮವಾರ ಬೆಂಗಳೂರಿಗೆ ಆಗಮಿಸಿರುವ ಮೋದಿಯವರು ಗ್ರೀನ್ ಮೊಬಿಲಿಟಿ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ.
ಈ ರ‍್ಯಾಲಿಯಲ್ಲಿ ಹಸಿರು ಇಂಧನದ ಮೂಲಕ ಸಂಚರಿಸುವ ವಾಹನಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಮತ್ತು ಹಸಿರು ಇಂಧನಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.
ಸಾವಿನ ನಂತರವೂ ಆತ್ಮೀಯರೊಂದಿಗೆ ಗೊಬ್ಬರ ರೂಪದಲ್ಲೂಳಿವ ಪರಿಕಲ್ಪನೆ!
ರ‍್ಯಾಲಿಯು 42 ಕಿ.ಮೀ ರಸ್ತೆಯವರೆಗೂ ನಡೆಯಲಿದ್ದು, ರ‍್ಯಾಲಿಗೆ 1,000-1,5000 ವಿದ್ಯಾರ್ಥಿಗಳನ್ನು ಕಳುಹಿಸುವಂತೆ ವಿವಿಗಳಿಗೆ ಶಿಕ್ಷಣ ಇಲಾಖೆ ಮನವಿ ಮಾಡಿರುವುದು ವರದಿ ಆಗಿದೆ.
ಇನ್ನು ರ‍್ಯಾಲಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಆರಂಭವಾಗಿ ನೀಲಕಂಠ ಪಾರ್ಕಿಂಗ್ ಮೈದಾನ ಮಾದಾವರ ಮೈದಾನದಲ್ಲಿ ಮುಕ್ತಾಯವಾಗಲಿದೆ.
ಯಾವೆಲ್ಲ ವಿವಿಗಳಿಗೆ ಮನವಿ ?
ನಗರದ ಪ್ರಮುಖ ವಿವಿಗಳಾದ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯ ಮತ್ತು ಯುವಿಸಿಇಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ನಿರ್ದೇಶನ ನೀಡಲಾಗಿದೆ ಎನ್ನಲಾಗಿದೆ.
Kisan Credit Card: ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು, ಯಾರೆಲ್ಲ ಇದಕ್ಕೆ ಅರ್ಹರು ಇಲ್ಲಿದೆ ಸಂಪೂರ್ಣ ಮಾಹಿತಿ!
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಸಂಚಾರದಲ್ಲಿ ಬದಲಾವಣೆ
ಬೆಂಗಳೂರಿಗೆ ಸೋಮವಾರ ಪ್ರಧಾನಿ ನರೇಂದ್ರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಕೆಲವು ನಿರ್ದಿಷ್ಟ ರಸ್ತೆಗಳಲ್ಲಿ ಮೂರು ದಿನಗಳ ಕಾಲ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಸಂಚಾರ ದಟ್ಟಣೆ ತಪ್ಪಿಸುವುದು ಹಾಗೂ ಸುರಕ್ಷತೆಯ ದೃಷ್ಟಿಯಿಂದ 3 ದಿನಗಳ ಕಾಲ ಎಲ್ಲ ಮಾದರಿಯ ಸರಕು ಸಾಗಣೆ ವಾಹನಗಳ ನಗರ ಪ್ರವೇಶವನ್ನು ನಿಷೇಧಿಸಲಾಗಿದೆ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮ ಫೆಬ್ರವರಿ 5ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಇದನ್ನು ಮೋದಿ ಉದ್ಘಾಟಿಸಲಿದ್ದಾರೆ.
ಇಲ್ಲಿಗೆ ದೇಶ ವಿದೇಶಗಳಿಂದ ಗಣ್ಯರು ಬರಲಿದ್ದಾರೆ. ಹೀಗಾಗಿ, ಸಂಚಾರ ದಟ್ಟಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿನ ರಸ್ತೆ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದ ಎನರ್ಜಿ ವೀಕ್ ಕಾರ್ಯಕ್ರಮ ಭಾಗವಹಿಸುವುದರಿಂದ ಫೆಬ್ರವರಿ 5, 6, 7 ರಂದು ಬೆಂಗಳೂರು ನಗರದೊಳಗೆ ಎಲ್ಲಾ ರೀತಿಯ ಲಘು, ಮಧ್ಯಮ ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧಿಸಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಕೆಲವು ಪ್ರಮುಖ ಮಾರ್ಗಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನೂ ತಡೆಯಲಾಗಿದೆ.
ಸರಕು ಸಾಗಣೆ ವಾಹನಗಳ ಸಂಚಾರ ನಿರ್ಬಂಧ ವಿಧಿಸಿರುವ ರಸ್ತೆಗಳ ವಿವರ
ತುಮಕೂರು ರಸ್ತೆಯಿಂದ ಬೆಂಗಳೂರು ನಗರದೊಳಗೆ ಸರಕು ಸಾಗಣೆ ವಾಹನಗಳಿಗೆ ನಿರ್ಬಂಧ 2. ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಮತ್ತು ಸೋಮನಹಳ್ಳಿಯವರೆಗೆ ಸಂಚಾರ ಮಾಡುವಂತಿಲ್ಲ. 3. ಬಳ್ಳಾರಿ ರಸ್ತೆಯಿಂದ ಬೆಂಗಳೂರು ನಗರದೊಳಗೆ ಪ್ರವೇಶ ನಿಷೇಧ. 4. ಹೊಸಕೋಟೆ ರಸ್ತೆಯಿಂದ ಹೆಬ್ಬಾಳವರೆಗೆ ಸಂಚಾರ ಮುಕ್ತವಿಲ್ಲ. ಇವು ಸರಕು ಸಾಗಣೆ ವಾಹನಗಳಿಗೆ ಮಾತ್ರ ನೀಡಲಾಗಿದೆ.
Share your comments