ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಕಚೇರಿ ಸಹಾಯಕ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 841 ಹುದ್ದೆಗಳು ಖಾಲಿಯಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು online ಮೂಲಕ ಅರ್ಜಿ ಸಲ್ಲಿಸಬಹುದು.
ಒಬಿಸಿ/ಸಾಮಾನ್ಯ/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ - 450 ರೂಪಾಯಿ, ಎಸ್ಸಿ /ಎಸ್ಟಿ/ಪಿಡಬ್ಲುಡಿ/ಇಎಕ್ಸ್ ಎಸ್ : -50 ರೂಪಾಯಿ ಹಾಗೂ ಬ್ಯಾಂಕ್ ಸಿಬ್ಬಂದಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು online ಮೂಲಕವೇ ಪಾವತಿಸಬೇಕು.
ಫೆ. 24, ರಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನ - ಮಾರ್ಚ್.15 ಆಗಿದೆ. online ಪರೀಕ್ಷೆಯ (Exam) ಸಂಭಾವ್ಯ ದಿನಾಂಕ - ಏಪ್ರಿಲ್ 9 ಮತ್ತು 10 ರಂದು ನಡೆಯಲಿದೆ.
ಅರ್ಹತೆ:
ಅಭ್ಯರ್ಥಿಗಲು (01-02-2021ಕ್ಕೆ ಅನ್ವಯವಾಗುವಂತೆ) ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 25 ವರ್ಷ
ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲುಡಿ/ನಿವೃತ್ತ ಯೋಧರಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.
ವಿದ್ಯಾರ್ಹತೆ : ಹತ್ತನೇ ಕ್ಲಾಸ್ ಪಾಸ್ (ಎಸ್ ಎಸ್ ಸಿ /ಮೆಟ್ರಿಕ್ಯುಲೇಶನ್) ಪಾಸಾಗಿರಬೇಕು. ಹೆಚ್ಚಿನ ವಿವರ ಮತ್ತು ನೊಂದಣಿಗೆ www.rbi.org.in ಗೆ ಸಂಪರ್ಕಿಸಬಹುದು. ನೋಂದಣಿಗೆ : ibpsonline.ibps.in/rbirpoafeb21/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಬಹುದು.
Share your comments