1. ಸುದ್ದಿಗಳು

Reshme Krishi Mela : ಇದೇ ತಿಂಗಳ 27ರಂದು ರೇಷ್ಮೆ ಕೃಷಿ ಮೇಳ

Maltesh
Maltesh
Reshme Krishi Mela in koppal

ಕೊಪ್ಪಳ: ಭಾರತ ಸರ್ಕಾರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ, ಜವಳಿ ಸಚಿವಾಲಯ ಮೈಸೂರು ಮತ್ತು ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ

ರೇಷ್ಮೆ ಕೃಷಿಯ ಗುರಿ-ಸಮೃದ್ಧಿಗೆ ದಾರಿ' ಎಂಬ ವಿಷಯದಡಿ ರೇಷ್ಮೆ ಕೃಷಿ ಮೇಳವನ್ನು ಜುಲೈ 27ರಂದು ಬೆಳಿಗ್ಗೆ 10.30ಕ್ಕೆ ಕೊಪ್ಪಳದ ಮರಿಶಾಂತವೀರ ನಗರದ (ಹೊಸಪೇಟೆ ರಸ್ತೆಯ ಬಿಎಸ್ ಪವರ್ ಗ್ರಾಂಡ್ ಹೋಟೆಲ್ ಹತ್ತಿರ) ಶ್ರೀ ಶಿವ ಶಾಂತ ಮಂಗಲ ಭವನದಲ್ಲಿ ಆಯೋಜಿಸಲಾಗಿದೆ.

ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ರೇಷ್ಮೆ ಕೃಷಿ ವಸ್ತುಪ್ರದರ್ಶನ ಉದ್ಘಾಟಿಸುವರು.

ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಗಾಲಿ ಜನಾರ್ಧನರೆಡ್ಡಿ ಹಾಗೂ ದೊಡ್ಡನಗೌಡ ಹನುಮಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯರುಗಳಾದ ಶಶೀಲ್ ಜಿ.ನಮೋಶಿ, ಡಾ.ಚಂದ್ರಶೇಖರ್ ಬಿ.ಪಾಟೀಲ, ಶರಣಗೌಡ ಅನ್ನದಾನಗೌಡ ಪಾಟೀಲ ಬಯ್ಯಾಪೂರ ಹಾಗೂ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಪಾಲ್ಗೊಳ್ಳುವರು.

ವಿಶೇಷ ಆಹ್ವಾನಿತರಾಗಿ ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಮತ್ತು ನಿರ್ದೇಶಕರಾದ ಎಂ.ಬಿ ರಾಜೇಶಗೌಡ, ಕೊಪ್ಪಳ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ಸುನೀಲ್ ವಂಟಗೋಡಿ,

ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ಪ್ರಭಾರ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ಮೀನಾಕ್ಷಿ, ನಿರ್ದೇಶಕರಾದ (ತಾಂತ್ರಿಕ) ಡಾ.ಎಸ್.ಮಂತಿರ ಮೂರ್ತಿ ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲಾ ಚುನಾಯಿತ ಸದಸ್ಯರು, ನಗರಸಭೆ ಸದಸ್ಯರು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ರೇಷ್ಮೆ ಬೆಳೆಗಾರರ ಸಂಘಗಳ ಸದಸ್ಯರು, ಮೈಸುರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಗಳು ಮತ್ತು ಸಿಬ್ಬಂದಿ, ಜಂಟಿ ನಿರ್ದೇಶಕರು, ರೇಷ್ಮೆ ಉಪನಿರ್ದೇಶಕರು, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕರು, ರಾಜ್ಯ ರೇಷ್ಮೆ ಇಲಾಖೆಯ ವಿಸ್ತರಣಾ ಅಧಿಕಾರಿಗಳು ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಮೈಸೂರು ಸಿ.ಎಸ್.ಆರ್.ಟಿ.ಐ ನಿರ್ದೇಶಕರಾದ ಡಾ.ಎಸ್.ಗಾಂಧಿ ದಾಸ್, ಬೆಂಗಳೂರು ಸಿ.ಎಸ್.ಟಿ.ಆರ್.ಐ ನಿರ್ದೇಶಕರಾದ ಡಾ ಪೆರಿಯಸಾಮಿ, ಬೆಂಗಳೂರು ರೇಷ್ಮೆ ಇಲಾಖೆ ಹೆಚ್ಚುವರಿ ರೇಷ್ಮೆ ಕೃಷಿ ನಿರ್ದೇಶಕರಾದ ಬಿ.ಆರ್ ನಾಗಭೂಷಣ್, ಮೈಸೂರು ಸಿ.ಎಸ್.ಆರ್.ಟಿ.ಐ ವಿಜ್ಞಾನಿ-ಡಿ ಡಾ.ಆರ್.ಭಾಗ್ಯ, ರಾಯಪುರ ಸಿ.ಎಸ್.ಟಿ.ಆರ್.ಐ ಎಸ್.ಟಿ.ಎಸ್.ಸಿ ಜವಳಿ ವಿಜ್ಞಾನಿ-ಡಿ ಡಾ.ಉದಯ ಸಿ., ಕೊಪ್ಪಳ ಆರ್.ಇ.ಸಿ-ಸಿ.ಎಸ್.ಆರ್.ಟಿ.ಐ ವಿಜ್ಞಾನಿ-ಸಿ ಡಾ.ಎ.ಉಮೇಶ, ಅವರು ಉಪಸ್ಥಿತರಿರುವರು ಎಂದು ಕೊಪ್ಪಳ ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಸಿ.ಅಂಜನಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Published On: 21 July 2023, 03:14 PM English Summary: Reshme Krishi Mela in koppal

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.