ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಹಭಾಗಿತ್ವದಲ್ಲಿ ಕೃಷಿ ಸಂಜೀವಿನಿ ಯೋಜನೆಯಡಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಕಲಬುರಗಿ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಮಣ್ಣು ಮಾದರಿಯ ಸಂಗ್ರಹಣೆ, ಮಣ್ಣು ಪರೀಕ್ಷೆಯ ಮಹತ್ವ, ಮಣ್ಣು ಆರೋಗ್ಯ ಚೀಟಿ, ರಸಗೊಬ್ಬರ ನಿರ್ವಹಣೆ ಸೇರಿದಂತೆ ಮುಂತಾದ ಕೃಷಿ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಅಧಿಕಾರಿಗಳ ತಂಡ ಪಶುವಿಜ್ಞಾನಿ ಡಾ. ಮಂಜುನಾಥ ಪಾಟೀಲ ಅವರೊಂದಿಗೆ ಕಲಬುರಗಿ ತಾಲೂಕಿನ ಧರ್ಮಾಪೂರ ಹೋಬಳಿಯ ನಂದೂರ್ (ಬಿ), ನಂದೂರ್ (ಕೆ) ಹಾಗೂ ಫರಹತಾಬಾದ ಹೋಬಳಿಯ ಸಿರನೂರ, ಫರಹತಾಬಾದ, ಸರಡಗಿ ಗ್ರಾಮಗಳಿಗೆ ತೆರಳಿ ದನ ಕರುಗಳಿಗೆ ಬರುವ ವಿವಿಧ ರೋಗಗಳು ಹಾಗೂ ಹತೋಟಿ ಕ್ರಮಗಳ ಕುರಿತು ಸಹ ರೈತರಿಗೆ ತಿಳಿಹೇಳಿದರು.
ಈ ಸಂಧರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾAತ ಜೀವಣಗಿ ಅವರು ಮಾತನಾಡಿ, ರೈತರಿಗೆ ಕೃಷಿ ಸಂಜೀವನಿ ಯೋಜನೆಯ ಕುರಿತು ವಿವರಿಸಿದರು. ರೈತರು ತಮ್ಮ ಬೆಳೆಗಳಿಗೆ ಕೀಟ ರೋಗ ಭಾದೆ ಆದರೆ ಕೃಷಿ ಸಂಜೀವನಿ ವಾಹನದ ಸಹಾಯ ಪಡೆಯಬೇಕು ಎಂದು ಅವರು ತಿಳಿದರು.
ಕೃಷಿ ಸಂಜೀವಿನಿ ಸಹಾಯವಾಣಿ 155313 ಗೆ ಕರೆ ಮಾಡಿ ಸದುಪಯೋಗ ಪಡೆಯಲು ಕೋರಿದರು. ಈ ಸಂಧರ್ಭದಲ್ಲಿ ಕೃಷಿ ಅಧಿಕಾರಿಗಳಾದ ಆಕಾಶ ರೆಡ್ಡಿ, ಪ್ರಿಯಾಂಕ ಕುಲಕರ್ಣಿ, ಆತ್ಮ ಹಾಗೂ ಕೃಷಿ ಸಂಜೀವಿನಿ ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರೈತರ ಮನೆ ಬಾಗಿಲಿಗೆ ಬರಲಿದೆ ಕೃಷಿ ಸಂಜೀವಿನಿ-ಕೃಷಿ ಸಹಾಯವಾಣಿ ನಂಬರ್ ಹಾಗೂ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
155313 ಇದು ಕೃಷಿ ಸಂಜೀವಿನಿ ಸಹಾಯವಾಣಿ
ಇದು ಕೃಷಿ ಸಂಜೀವಿನಿ ಟೋಲ್ ಫ್ರೀ ಸಹಾಯವಾಣಿಯಾಗಿದ್ದು, ಈ ಸಂಖ್ಯೆಗೆ ಯಾವುದಾದರೂ ಜಿಲ್ಲೆಯಿಂದ ಕರೆ ಮಾಡಿದಲ್ಲಿ ಟೋಲ್ ಫ್ರೀ ಸಂಖ್ಯೆಯಿಂದ ಕರೆ ಮಾಡಿದ ರೈತರಿರುವ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಕರೆ ಹೋಗುತ್ತದೆ. ಆಗ ರೈತರು ತಮ್ಮ ಸಮಸ್ಯೆಯನ್ನು ತಿಳಿಸಿ ಪರಿಹಾರ ಪಡೆಯಬಹುದಾಗಿದ್ದು, 155313 ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್ ನಂತೆ ಸಹಾಯವಾಣಿಯಾಗಿ ಕೆಲಸ ಮಾಡುತ್ತದೆ.
ಏನಿದು ಕೃಷಿ ಸಂಜೀವಿನಿ…?
ಇದು ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯು ನೈಸರ್ಗಿಕ ವಿಕೋಪಗಳಾದ ಅನಾವೃಷ್ಟಿ , ಅತಿವೃಷ್ಟಿ , ಚಂಡಮಾರುತ , ಬೆಳೆಗಳಿಗೆ ಕಾಡುವ ಕೀಟ ಮತ್ತು ರೋಗ ಬಾಧೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ . ಸುಧಾರಿತ ಕೃಷಿ ಉತ್ಪಾದನಾ ತಾಂತ್ರಿಕತೆ , ಗುಣಮಟ್ಟದ ಕೃಷಿ ಪರಿಕರಗಳ ಪೂರೈಕೆ ಮತ್ತು ಶಿಫಾರಸ್ಸು ಮಾಡಲಾದ ರಸಗೊಬ್ಬರಗಳ ಸಮರ್ಪಕ ಬಳಕೆ , ರೋಗ – ಕೀಟಗಳ ಹತೋಟಿ , ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ , ಸೂಕ್ತ ಬೆಳೆ ಬೆಳೆಯಲು ಪ್ರೋತ್ಸಾಹಿಸಲಾಗುವುದು.. ಕೀಟ , ರೋಗ ಮತ್ತು ಕಳೆಗಳ ಬಾಧೆ ಹಾಗೂ ಮಣ್ಣಿನ ಪೋಷಕಾಂಶ ಕೊರತೆ ಹಾಗು ಸಮರ್ಪಕ ನಿರ್ವಹಣೆ ಕುರಿತಂತ ರೈತರ ತಾಕುಗಳಲ್ಲಿಯೇ ಹತೋಟಿ ಕ್ರಮಗಳ ಕುರಿತು ಮಾರ್ಗೊಪಾಯಗಳನ್ನು ಒದಗಿಸಲಾಗುವುದು
Share your comments