ಜೂನ್ 21ರ ಆಷಾಢ ಮಾಸದ ಅಮಾಸ್ಯೆಯಂದು 2020ರ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಸುಮಾರು 30 ಸೆಕೆಂಡುಗಳ ಕಾಲ ಸೂರ್ಯ ಮುತ್ತಿನ ಹಾರದಂತೆ ಗೋಚರಿಸಲಿದ್ದಾನೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಭೋಮಂಡಲದ ಅದ್ಭುತ ದೃಶ್ಯ ಚಿತ್ತಾರವನ್ನು ಹರಿಯಾಣ, ಉತ್ತರಾಖಂಡ್ ಮತ್ತು ರಾಜಸ್ಥಾನದಲ್ಲಿ ಮಾತ್ರ ಕಾಣಬಹುದಾಗಿದೆ. ಇನ್ನುಳಿದಂತೆ ದೇಶದ ಹಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ.ಈ ಗ್ರಹಣವು ಪೂರ್ಣ ಸೂರ್ಯಗ್ರಹಣಕ್ಕಿಂತ ಭಿನ್ನವಾಗಿದೆ. ಇದು ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ, ಇಥಿಯೋಪಿಯಾ, ಪಾಕಿಸ್ತಾನ, ಭಾರತ ಮತ್ತು ಚೀನಾ ಸೇರಿದಂತೆ ಆಫ್ರಿಕಾದ ಕೆಲವು ಭಾಗಗಳಲ್ಲಿಯೂ ಕಾಣಿಸುತ್ತದೆ
ಜೂನ್ 21ರಂದು ವಿಶ್ವವು 2020 ರ ಮೊದಲ ಸೂರ್ಯಗ್ರಹಣ (Solar Eclipse)ಕ್ಕೆ ಸಾಕ್ಷಿಯಾಗಲಿದೆ. ಪೂರ್ಣ ಸೂರ್ಯಗ್ರಹಣ ಸಂಭವಿಸಿದಾಗ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುತ್ತದೆ, ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗವನ್ನು ಮಾತ್ರ ಮರೆಮಾಡಲಾಗುತ್ತದೆ.
ಭಾರತದಲ್ಲಿ ಸೂರ್ಯಗ್ರಹಣ ಸಮಯ
ಸೂರ್ಯಗ್ರಹಣದ ಸೂತಕದ ಅವಧಿ ಜೂನ್ 20 ರಂದು ರಾತ್ರಿ 10: 20 ರಿಂದ ಪ್ರಾರಂಭವಾಗಲಿದೆ. 21 ಜೂನ್ ಬೆಳಿಗ್ಗೆ 9:15ಕ್ಕೆಭಾಗಶಃ ಗ್ರಹಣ ಪ್ರಾರಂಭವಾಗುತ್ತದೆ. ಬೆಳಿಗ್ಗೆ 10:17 ಕ್ಕೆ ಪೂರ್ಣ ಗ್ರಹಣ ಸಮಯವಾಗಿರುತ್ತದೆ. ಮಧ್ಯಾಹ್ನ 12 ಗಂಟೆ 10 ನಿಮಿಷಗಳು ಗರಿಷ್ಠ ಗ್ರಹಣ ಉಳಿಯುತ್ತದೆ. ಮಧ್ಯಾಹ್ನ 2 ಗಂಟೆಗೆ ಸಂಪೂರ್ಣ ಗ್ರಹಣ ಕೊನೆಗೊಳ್ಳುತ್ತದೆ.
Share your comments