2020-21 ನೇ ಸಾಲಿನ ಹಿಂಗಾರು ಹಂಗಾಮಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಶೇಂಗಾ, ಕಡಲೆ, ಜೋಳ, ಗೋಧಿ, ರಾಗಿ, ಸೂರ್ಯಕಾಂತಿ, ಕುಸುಬೆ, ಅಲಸಂಧಿ ಸೇರಿದಂತೆ ಇನ್ನಿತರ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
ಇಲಾಖೆಯಿಂದ ನೀಡಲಾದ ಮಾರ್ಗಸೂಚಿಯನ್ವಯ ಪ್ರತಿ ಒಬ್ಬ ರೈತರಿಗೆ ಗರಿಷ್ಠ 5 ಎಕರೆಗೆ ಅಥವಾ ಅವರ ವಾಸ್ತವಿಕ ಹಿಡುವಳಿ ಇದರಲ್ಲಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ರಿಯಾಯತಿ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು. ರೈತರ ಸ್ವಂತ ಹಿಡುವಳಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು.
ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆ ಕೊನೆಗೊಳ್ಳುತ್ತಿದ್ದಂತೆಯೇ, ಹಿಂಗಾರು ಬಿತ್ತನೆ ಕಾರ್ಯ ಗರಿಗೆದರಿದೆ.ಹಾಗಾಗಿ ರೈತರು ಆಯಾ ಜಿಲ್ಲೆಗಳಲ್ಲಿರುವ ರೈತಸಂಪರ್ಕ ಕೇಂದ್ರ(ಆರ್‌ಎಸ್‌ಕೆ)ಗಳಿಗೆ ಸಂಪರ್ಕಿಸಿ ಬಿತ್ತನೆ ಬೀಜ ಪಡೆಯಬಹುದು. ಎಸ್.ಸಿ ಎಸ್ಟಿಯವರಿಗೆ ಶೇ. 75 ರಷ್ಟು ಹಾಗೂ ಇತರ ಪಂಗಡವರಿಗೆ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಬೀಜ ವಿತರಿಸಲಾಗುವುದು.
ಬೀಜ ಪಡೆಯಲು ಸಲ್ಲಿಸಬೇಕಾದ ದಾಖಲೆಗಳು:
- ಪಹಣಿ (recent original/xerox)
- ಆಧಾರ್ ಕಾರ್ಡ್ (xerox)
- ಬ್ಯಾಂಕ್ ಖಾತೆpassbbok (xerox)
- ನೀರು ಬಳಕೆ ಪ್ರಮಾಣ ಪತ್ರ (original).
- ಜಾತಿ ಪ್ರಮಾಣ ಪತ್ರ.(ಎಸ್ಸಿ/ಎಸ್ಟಿ ರೈತರಿಗೆ ಮಾತ್ರ - RD ಸಂಖ್ಯೆ ಕಡ್ಡಾಯ) ಈ ಮೇಲಿನ ಎಲ್ಲಾ ದಾಖಲಾತಿಗಳು ರೈತರಿಂದ ಸ್ವಯಂ ದೃಡೀಕರಿಸಬೇಕು.
2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜ ಖರೀದಿಸಿದ ರೈತರು ಯಾವುದೇ ಬೀಜ ಖರೀದಿಸಲು ಅರ್ಹರಿರುವುದಿಲ್ಲ. Covid -19 ಹಿನ್ನೆಲೆಯಲ್ಲಿ ಎಲ್ಲಾರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕನಿಷ್ಠ 1 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
ರಿಯಾಯಿತಿ ದರ:
ಶೇಂಗಾ (ನೆಲಗಡಲೆ) ಎಸ್ಸಿ, ಎಸ್ಟಿ ರೈತರಿಗೆ ಪ್ರತಿ ಕ್ವಿಂಟಾಲಿಗೆ 6450 ರೂಪಾಯಿ ಹಾಗೂ ಸಾಮಾನ್ಯ ರೈತರಿಗೆ ಪ್ರತಿ ಕ್ವಿಂಟಾಲಗೆ 7400 ರೂಪಾಯಿಯಂತೆ ವಿತರಿಸಲಾಗುವುದು.ಇದೇ ರೀತಿ ಇತರ ಬಿತ್ತನೆ ಬೀಜಗಳು ಸಬ್ಸಿಡಿಯಲ್ಲಿ ಲಭವಿದೆ. ನಿಮ್ಮ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆಯಬಹುದು
ರೈತಭಾಂಧವರು ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅಗತ್ಯವಿರುವ ಬಿತ್ತನೆ ಬೀಜವನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಡಿ ಪಡೆಯಬಹುದಾಗಿದೆ.
Share your comments