1. ಸುದ್ದಿಗಳು

ಗೋವಿನ ಜೋಳದಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣಾ ಕ್ರಮಗಳು

ಗೋವಿನ ಜೋಳದಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆ ಲಕ್ಷಣಗಳು ಹಾಗೂ ಸಮಗ್ರ ನಿರ್ವಹಣಾ ಕ್ರಮಗಳು


ಡಾ.ಎಸ್.ಆಯ್. ಹರ್ಲಾಪುರ, ಡಾ. ಎಸ್.ಸಿ. ತಳೇಕರ

, ಡಾ. ಎಸ್.ಆರ್.ಸಲಕಿನಕೊಪ್ಪ ಹಾಗೂ ಡಾ. ಆರ್.ಎಮ್.ಕಾಚಾಪುರ
ಅಖಿಲ ಭಾರತ ಗೋವಿನಜೋಳ ಸಮನ್ವಯ ಅಭಿವೃದ್ಧಿ ಯೋಜನೆ,

ಮುಖ್ಯ ಕೃಷಿ ಸಂಶೋಧನಾ ಕೇಂದ್ರ,
ಕೃಷಿ ವಿಶ್ವವಿದ್ಯಾಲಯ, ಧಾರವಾಡ

 


ಗೋವಿನ ಜೋ¼ ಬೆಳೆಯನ್ನು ಎಲ್ಲಾ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕ, ಆಂದ್ರ ಪ್ರದೇಶ, ಬಿಹಾರ್, ತಮಿಳನಾಡು, ಪಂಜಾಬ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ನೀರಾವರಿಯಲ್ಲದೆ ಮಳೆಯಾಶ್ರಿತ ಪ್ರದೇಶದಲ್ಲಿಯೂ ಬೆಳೆಯಲಾಗುತ್ತದೆ. ಗೋವಿನ ಜೋಳವನ್ನು ಭಾರತ ಸರ್ಕಾರವು ಕೈಗಾರಿಕೆ ಬೆಳೆ ಎಂದು ಘೋಷಿಸಿದೆ. ಕರ್ನಾಟಕದಲ್ಲಿ ಈ ಬೆಳೆಯನ್ನು ವರ್ಷವಿಡಿ ಬೆಳೆಯಲಾಗುತ್ತಿದ್ದು ಮುಂಗಾರಿನಲ್ಲಿ ಶೇಕಡಾ 86 ರಷ್ಟು ಹಿಂಗಾರಿಯಲ್ಲಿ ಶೇಕಡಾ 14 ರಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಸುಮಾರು 11.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳವನ್ನು ಬೆಳೆಯುತ್ತಿದ್ದು, 30.0 ಲಕ್ಷ ಟನ್ ಉತ್ಪಾಧನೆ ಮತ್ತು 27.5 ಕ್ವಿ/ಹೆ. ಉತ್ಪಾಧಕತೆ ಇರುತ್ತದೆ. ಮುಖ್ಯವಾಗಿ ಬೆಳಗಾವಿ, ಬಳ್ಳಾರಿ, ದಾವಣಗೇರಿ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಬೆಳೆಯು ಹೆಚ್ಚು ಕೇಂದ್ರೀಕೃತವಾಗಿದೆ. ಈ ಬೆಳೆಗೆ ಬೆಳೆವಣಿಗೆ ಹಂತದಿಂದ ಹಿಡಿದು ಕಾಳು ಕಟ್ಟುವ ಹಂತದವರೆಗೂ ಅನೇಕ ಕೀಟಗಳ ಬಾಧೆ ಕಂಡುಬರುತ್ತದೆ. 2018 ಮುಂಗಾರು ಹಂಗಾಮಿನಲ್ಲಿ ಬೆಳೆದ ಗೋವಿನಜೋಳದ ಬೆಳೆಗೆ ಫಾಲ್ ಸೈನಿಕ ಹುಳುವಿನ ಬಾಧೆಯು ಕಂಡುಬಂದಿದೆ. 2015ರ ವರೆಗೆ ಈ ಕೀಟವು ಅಮೇರಿಕದಲ್ಲಿ ಮಾತ್ರ ಕಂಡು ಬಂದಿತ್ತು. ನಂತರ ಆಫ್ರಿಕಾ ಖಂಡದ ನೈಜೇರಿಯಾ ಮತ್ತು ಹಲವು ಪ್ರದೇಶಗಲಲ್ಲಿ ಈ ಹುಳುವಿನ ಭಾದೆಯ ಬಗ್ಗೆ ವರದಿಯಾಗಿದೆ. ತದನಂತರ ಇದೇ ಮೋದಲು ಬಾರಿಗೆ 2018 ರ ಮುಂಗಾರು ಹಂಗಾಮಿನ ಮೇ ತಿಂಗಳಲ್ಲಿ ಫಾಲ್ ಸೈನಿಕ ಹುಳುವಿನ ಬಾಧೆಯನ್ನು ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಈಗ ಈ ಹುಳುವು ಕರ್ನಾಟಕದ ಎಲ್ಲ ಗೋವಿನಜೋಳ ಬೆಳೆಯುವ ಪ್ರದೇಶಗಳಲ್ಲಿ ಕಂಡು ಬಂದಿದ್ದು, ಹುಳುವಿನ ಕಿರುಪರಿಚಯ ಬಾಧೆಯ ಲಕ್ಷಣಗಳು ಮತ್ತು ಕೀಟದ ನಿರ್ವಹಣೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಪತಂಗ ಜಾತಿಗೆ ಸೇರಿದ ಈ ಸೈನಿಕ ಹುಳುವನ್ನು ವೈಜ್ಞಾನಿಕವಾಗಿ ಸ್ಪೋಡಾಪ್ಟರಾ ಪ್ರೂಜೀಪರ್ಡಾ (Sಠಿoಜoಠಿಣeಡಿಚಿ ಜಿಡಿugiಠಿeಡಿಜಚಿ) ಎಂದು ಕರೆಯುತ್ತಾರೆ. ಈ ಕೀಟವು ಗೋವಿನಜೋಳದ ಜೊತೆಗೆ ಏಕದಳ ಧಾನ್ಯಗಳಾದ ಜೋಳ, ರಾಗಿ ಮತ್ತು ಭತ್ತ ಬೆಳೆಗಳ ಮೇಲೆ ಅಕ್ರಮಣ ಮಾಡುತ್ತವೆ.
ಕೀಟ ಬಾಧೆಯ ಲಕ್ಷಣಗಳು.
ಈ ಕೀಟದ ಭಾದೆಯು ತಡವಾಗಿ ಬಿತ್ತನೆ ಮಾಡಿದ ಬೆಳೆಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಈ ಹುಳುಗಳು ಕಂದು ಹಾಗೂ ಕಪ್ಪು ಬಣ್ಣದಿಂದ ಕೂಡಿದ್ದು, ಸುಮಾರು 1.5 ಇಂಚು ಉದ್ದವಿರುತ್ತದೆ. ಒಂದು ಹೆಣ್ಣು ಪತಂಗವು 50 ರಿಂದ 150 ಮೊಟ್ಟೆಗಳನ್ನು ಎಲೆಗಳ ಮೇಲೆ ಹಾಗೂ ಗರಿಯ ತಳ ಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತದೆ. ಆ ಮೊಟ್ಟೆಗಳು 3 ರಿಂದ 5 ದಿನಗಳಲ್ಲಿ ಹುಳುಗಳಾಗಿ ಪರಿವರ್ತನೆ ಹೊಂದಿ ಸುಳಿಗರಿಗಳ ಕಡೆಗೆ ಸಾಗುತ್ತವೆ. ಹುಳುಗಳ ತಲೆಗಳ ಮೇಲೆ “ಙ” ಆಕಾರದ ಬಿಳಿ ಚಿಹ್ನೆಯನ್ನು ಕಾಣಬಹುದು. ಕೀಡೆಗಳು ಪ್ರಮುಖವಾಗಿ ಎಲೆಗಳನ್ನು ಸೇವಿಸುತ್ತವೆ. ಸಣ್ಣ ಕೀಡೆಗಳು ಆರಂಭದಲ್ಲಿ ಎಲೆಯ ಅಂಗಾಂಶವನ್ನು ಒಂದು ಬದಿಯಿಂದ ಕೆರೆದು ತಿನ್ನುತ್ತವೆ. ಪ್ರಥಮ ಹಂತದ ಮರಿಹುಳುಗಳು ಸಾಮೂಹಿಕವಾಗಿದ್ದು ಎಲೆಯ ಹರಿತ್ತನ್ನು ಕೆರೆದು ತಿನ್ನುವುದರಿಂದ ಎಲೆಗಳ ಮೇಲೆ ಪಾರದರ್ಶಕವಾದ ಪದರಿನ ಕಿಂಡಿಗಳನ್ನು ಕಾಣಬಹುದು. ಎರಡನೆಯ ಮತ್ತು ಮೂರನೆ ಹಂತದ ಕೀಡೆಗಳು ಸುಳಿಯಲ್ಲಿರುವ ಎಲೆಗಳಲ್ಲಿ ರಂಧ್ರಗಳನ್ನು ಮಾಡುತ್ತವೆ. ನಂತರ ಬೆಳೆದಂತೆಲ್ಲ ಹುಳುಗಳು ಪಕ್ಕದ ಗಿಡಗಳಿಗೆ ಹರಡಿ ಗಿಡದ ಸುಳಿಯಲ್ಲಿ ಉಳಿದುಕೊಂಡು ಎಲೆಗಳನ್ನು ತಿಂದು ಬದುಕುತ್ತವೆ. ಈ ಕೀಟದಿಂದ ಹಾನಿಗೊಳಗಾದ ಎಲೆಗಳು ಜಾಳುಜಾಳಾಗಿದ್ದು ಎಲೆಗಳಲ್ಲಿ ಸಾಲಾಗಿ ಉದ್ದನೆಯ ರಂದ್ರಗಳು ಉಂಟಾಗುತ್ತವೆ. ನಂತರ ಬೆಳೆದ ಕೀಟಗಳು, ಎಲೆಗಳನ್ನು ತುದಿಯಿಂದ ಮಧ್ಯದ ಕಡೆಗೆ ತಿನ್ನುವುದರಿಂದ ಎಲೆಗಳು ಹರಿದಂತೆ ಗೋಚರವಾಗುತ್ತವೆ. ಕೀಟದ ಬಾಧೆಯು ತೀವ್ರವಾದಲ್ಲಿ ಸಉಳಿಯನ್ನೆ ತಿಂದು ಅಧಿಕ ಪ್ರಮಾಣದಲ್ಲಿ ಹಿಕ್ಕೆಗಳನ್ನು ಹಾಕುತ್ತವೆ. ಒಣಗಿದ ಈ ಹಿಕ್ಕೆಗಳು ತೌಡನ್ನು ಹೋಲುವುದರಿಂದ ಗಿಡದ ಮೇಲೆಲ್ಲಾ ತೌಡು ಬಿದ್ದಿರುವಂತೆ ಕಾಣಿಸುತ್ತದೆ. ಗೋವಿನಜೋಳದಲ್ಲಿ ಎಲೆಗಳನ್ನು ತಿಂದು ಹಾನಿ ಮಾಡುವುದಲ್ಲದೇ ಕೆಲವೊಮ್ಮೆ ತೆನೆ ಮತ್ತು ಕಾಳುಗಳನ್ನು ತಿನ್ನುತ್ತವೆ. ತೆನೆಯ ತುದಿಯಲ್ಲಿ ಕಾಳುಗಳನ್ನು ಅಕ್ರಮಿಸುವ ಮೊದಲು ತುಪ್ಪಳ ಆಹಾರ ಸೇವಿಸಿ ತೆನೆಯ ಬದಿಯಲ್ಲಿ ಸಿಪ್ಪೆಯ ಮೂಲಕ ಒಳಗೆ ಪ್ರವೇಶಿಸಿ ಕಾಳುಗಳನ್ನು ತಿಂದು ನಾಶಪಡಿಸುತ್ತವೆ. ಬಲಿತ ಕೀಡೆಗಳು ಕೀಟಭಕ್ಷಕ ನಡುವಳಿಕೆ ಹೊಂದಿದ್ದು ಚಿಕ್ಕ ಚಿಕ್ಕ ಕೀಡೆಗಳನ್ನು ತಿನ್ನುತ್ತವೆ. ಈ ಕೀಟ ಹೆಚ್ಚಾಗಿ 40 ರಿಂದ 50 ದಿನದೊಳಗಿನ ಬೆಳೆಯನ್ನು ನಾಶಮಾಡುತ್ತವೆ. ನಿರಂತರವಾಗಿ ಆಹಾರ ಭಕ್ಷಿಸುವ ಬೆಳೆದ ಕೀಡೆಗಳು ತಾವು ತಿನ್ನುವ ಆಹಾರವು ಖಾಲಿಯಾದ ತಕ್ಷಣ ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಸೈನಿಕೋಪಾದಿಯಲ್ಲಿ ಪಸರಿಸುವ ಶಕ್ತಿಯನ್ನು ಹೊಂದಿದೆ.
ಸಮಗ್ರ ನಿರ್ವಹಣಾ ಕ್ರಮಗಳು:
ಬೇಸಾಯ ಕ್ರಮಗಳಿಂದ ನಿರ್ವಹಣೆ
1. ಮಾಗಿ ಉಳುಮೆ ಮೂಲಕ ಆಳವಾಗಿ ನೇಗಿಲು ಹೊಡೆಯುವುದರಿಂದ ಮಣ್ಣಿನಲ್ಲಿ ಅಡಗಿರುವ ಕೀಟದ ಕೋಶ ಹಾಗೂ ಇತರೆ ಹಂತಗಳನ್ನು ಪರಭಕ್ಷಕ ಕೀಟಗಳಿಗೆ, ಪಕ್ಷಿಗಳಿಗೆ ಆಹಾರವಾಗುವಂತೆ ನೋಡಿಕೊಳ್ಳುವುದು.
2. ಶಿಫಾರಸ್ಸು ಮಾಡಿದ ಅವಧಿಯಲ್ಲಿ ಬಿತ್ತನೆ ಕಾರ್ಯಕ್ರಮ ಪೂರ್ಣಗೊಳಿಸುವುದು. ಹಂತ ಹಂತವಾಗಿ ಬಿತ್ತನೆಯಾದಲ್ಲಿ ಕೀಟಕ್ಕೆ ನಿರಾತಂಕವಾಗಿ ಆಹಾರದ ಲಭ್ಯತೆಯಾಗಲಿದ್ದು, ಹಲವಾರು ಸಂತತಿಗಳನ್ನು ಬೆಳೆಯ ಹಂತದಲ್ಲಿ ಕಾಣಬಹುದು ಇದರಿಂದ ನಷ್ಟದ ಪ್ರಮಾಣ ಹೆಚ್ಚಾಗಲಿದೆ.
3. ಗೋವಿನ ಜೋಳದ ಜೊತೆ ಅಂತರ ಬೆಳೆಗಳನ್ನು ಬೆಳೆಯುವುದು. ಗೋವಿನ ಜೋಳದೊಂದಿಗೆ ಆಯಾ ಹವಮಾನಕ್ಕೆ ಅನುಗುಣವಾಗಿ (ಉದಾ: ಗೋವಿನಜೋಳ + ತೊಗರಿ, ಗೋವಿನಜೋಳ + ಉದ್ದು, ಗೋವಿನಜೋಳ + ಹೆಸರು ಇತ್ಯಾದಿ)
4. ಗೋವಿನ ಜೋಳದ ತೆನೆಗೆ ಸಿಪ್ಪೆಯು ಗಟ್ಟಿಯಾಗಿ ಅಂಟಿಕೊಂಡಿರುವ ಗೋವಿನ ಜೋಳದ ತಳಿಗಳನ್ನು ಬಿತ್ತನೆಗೆ ಬಳಸುವದು ಸೂಕ್ತ. ಇದರಿಂದ ಕೀಟದ ಬಾಧೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ.
ತಾಂತ್ರಿಕ ನಿರ್ವಹಣಾ ಕ್ರಮಗಳು
1. ಗೋವಿನ ಜೋಳದ ಬೆಳೆಯ ಪರಿಸರದಲ್ಲಿ ಪರತಂತ್ರ / ಪರೋಪಕಾರಿ ಕೀಟಗಳನ್ನು ಉತ್ತೇಜಿಸಿ ಸಂರಕ್ಷಿಸಿ ಬಳಸಿಕೊಳ್ಳಲು ಗೋವಿನ ಜೋಳದ ವೈವಿಧ್ಯತೆ ಕಾಪಾಡಿಕೊಳ್ಳುವದು. ಉದಾ: ಅಕ್ಕಡಿ ಕಾಳು ಹಾಗೂ ಹೂವಿನ ಬೆಳೆಗಳನ್ನು ಬೆಳೆಯುವುದು ಸೂಕ್ತ.
2. ಮೋಹಕ ಬಲೆಗೆ ಬಿದ್ದ ಕೀಟಗಳ ಸಂಖ್ಯೆ ವೀಕ್ಷಿಸಿ, ಮೊಟ್ಟೆ ಪರತಂತ್ರ ಜೀವಿ ಟೆಲಿನೋಮಸ್ ರೀಮಸ್ ಕೀಟಗಳನ್ನು ಪ್ರತಿ ಎಕರೆಗೆ 50,000 ದಂತೆ ಪ್ರತಿ ವಾರದ ಅಂತರದಲ್ಲಿ ಪ್ರವಾಹೋಪಾದಿಯಲ್ಲಿ ಬಿಡುಗಡೆ ಮಾಡುವುದು
3. ಕೀಟ ನಿರ್ವಹಣೆಗಾಗಿ ಮೆಟಾರೈಜಿಯಂ (=ನ್ಯೂಮೋರಿಯಾ) ರಿಲೈ ಶಿಲೀಂದ್ರವನ್ನು 2 ಗ್ರಾಂ ನಂತೆ ಅಥವಾ ಬ್ಯಾಸಿಲ್ಲಸ್ ಥುರಿಂಜಿಯನ್ಸಿಸ್ ವಿ. ಕುರಸ್ಟಾಕಿ ಜೀವಾಣು ಬ್ಯಾಕ್ಟೀರಿಯಾ ಹೊಂದಿದ ಜೈವಿಕ ಕೀಟನಾಶಕವನ್ನು 1 ಗ್ರಾಂ. ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ 15 ರಿಂದ 25 ದಿನದ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಾಯಂಕಾಲ ಸಿಂಪಡಿಸಬೇಕು. ಪ್ರತಿ ಎಕರೆಗೆ ಸುಮಾರು 400 ಗ್ರಾಂ. ಜೈವಿಕ ಕೀಟನಾಶಕ ಬೇಕಾಗುವುದು. ನಂತರ ಪ್ರತಿ 10 ದಿನಸಗಳ ಅಂತರದಲ್ಲಿ ಕೀಟದ ಸಂಖ್ಯೆಯನ್ನಾಧರಿಸಿ ಸಿಂಪರಣೆಯನ್ನು ಮುಂದುವರೆಸುವುದು ಮೆಟಾರೈಜಿಯಂ ( =ನ್ಯೂಮೋರಿಯಾ) ರಿಲೈ ಶಿಲೀಂದ್ರದ ಬಳಕೆಯು ವಲಯ 8 ರಲ್ಲಿ ಬರುವ ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ಸೀಮಿತವಾಗಿರಲಿ.
ರಾಸಾಯನಿಕ ನಿಯಂತ್ರಣ ಕ್ರಮಗಳು
1. ಪ್ರಥಮ ಸಿಂಪರಣೆ: ಶೇ. 5% ರಷ್ಟು ಬಾಧೆಯನ್ನು ಗಮನಿಸಿದಾಗ ಸಸಿಯಿಂದ ಮೊದಲ ಸುಳಿ ಹಂತ ಕಂಡುಬಂದಾಗ ಮೊದಲ ಹಂತದ ಕೀಡೆಗಳನ್ನು ನಿರ್ವಹಿಸಲು, ಸೇ. 5ರ ಬೇವಿನ ಬೀಜದ ಕಷಾಯ (ಓSಏಇ) ಅಥವಾ 5 ಮಿ.ಲೀ. ಅಜಾಡಿರೆಕ್ಟಿನ್ (1500 ಪಿಪಿಎಮ್) ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಯ ಸುಳಿಯಲ್ಲಿ ಬೀಳುವಂತೆ ಸಿಂಪಡಿಸಬೇಕು.
2. ದ್ವಿತೀಯ ಸಿಂಪರಣೆ: (ಮಧ್ಯಮ ಸುಳಿ ಹಂತದಿಂದ ಕೊನೆಯ ಸುಳಿ ಹಂತದವರೆಗೆ): ಬೆಳೆಯು ಶೇ. 10 ರಿಂ 20 ರಷ್ಟು ಹಾನಿಗೊಳಗಾದಾಗ 2ನೇ ಮತ್ತು 3 ನೇ ಹಂತದ ಮರಿಹುಳುಗಳನ್ನು ನಿರ್ವಹಣೆ ಮಾಡಲು 0.2 ಗ್ರಾಂ. ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. ಅಥವಾ 0.2 ಮಿ. ಲೀ. ಸ್ಟೈನೋಸ್ಯಾಡ್ 45 ಎಸ್.ಸಿ. ಅಥವಾ 0.5 ಮಿ.ಲೀ. ಸ್ಟೈನೋಟೊರಾಮ್ 12 ಎಸ್.ಸಿ. ಅಥವಾ 0.2 ಮಿ.ಲೀ. ಕ್ಲೋರ್ಯಾಂಟ್ರಿನಿಲಿಪ್ರೋಲ್ 18.5 ಎಸ್.ಸಿ. ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು.
ಕಳಿತ ವಿಷ ಪಾಷಾಣದ ಬಳಕೆಯಿಂದ ಕೀಟದ ನಿರ್ವಹಣೆ.
ವಿಷಪಾಷಾಣ ತಯಾರಿಸು ವಿಧಾನ :
ಒಂದು ಎಕರೆಗೆ ವಿಷ ಪಾಷಣವನ್ನು ತಯಾರಿಸುಲು 20 ಕಿ.ಗ್ರಾಂ. ಭತ್ತ ಅಥವಾ ಗೋದಿಯ ತೌಡನ್ನು ತಟ್ಟಿನ ಮೇಲೆ ಅಥವಾ ಕಾಂಕ್ರಿಟ್ ನೆಲದ ಮೇಲೆ ಹರಡಬೇಕು. ನಂತರ 6-8 ಲೀಟರ್ ನೀರಿನಲ್ಲಿ 250 ಮಿ.ಲೀ. ಮನೋಕ್ರೋಟೊಫಾಸ್ 36 ಎಸ್.ಎಲ್. ಕೀಟನಾಶಕವನ್ನು 2 ಕಿ.ಗ್ರಾಂ ಬೆಲ್ಲದೊಂದಿಗೆ ಬೆರೆಸಿ ತೌಡಿನೊಂದಿಗೆ ಚೆನ್ನಾಗಿ ಕೂಡಿಸಿ ಮಿಶ್ರಣ ಮಡಬೇಕು. ಈ ಮಿಶ್ರಣವೇ ವಿಷ ಪಾಷಾಣ. ಹೀಗೆ ತಯಾರಿಸಿದ ವಿಷ ಪಾóಷಾಣವನ್ನು 1-2 ದಿನ ಗೋಣಿ ಚೀಲ ಅಥವಾ ಬುಟ್ಟಿ ಅಥವಾ ಡ್ರಮ್ಮುಗಳಲ್ಲಿ ಮುಚ್ಚಿಡಬೇಕು. ಇದರಿಂದ ರಾಸಾಯನಿಕ ಕ್ರಿಯೆ (ಫರ್ಮೆಂಟೇಶನ್) ಉಂಟಾಗಿ ವಿಷ ಪಾಷಾಣಕ್ಕೆ ಕೀಡೆಗಳನ್ನು ಆಕರ್ಷಿಸುವ ಗುಣ ಬರುತ್ತದೆ. ಎಕರೆಗೆ 20 ಕಿ. ಗ್ರಾಂ. ಪ್ರಮಾಣದ ವಿಷ ಪಾಷಾಣವನ್ನು ಕೈಗವಚ ಧರಿಸಿಕೊಂಡು ಎಲೆಗಳ ಸಂದು ಮತ್ತು ಸುಳಿ ಮೇಲೆ ಬೀಳುವ ಹಾಗೆ ಬೆಳೆಯ ಮೇಲೆ ಎರಚಬೇಕು, ಕೀಡೆಗಳು ಈ ವಿಷ ಪಾಷಾಣಕ್ಕೆ ಬೇಗನೆ ಆಕರ್ಷಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ. ಬೆಳೆಗಳ ಸಂಖ್ಯೆ ದಟ್ಟವಾಗಿದ್ದಲ್ಲಿ ಎರಡು ಸಾಲಿಗೊಂದರಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಬೆಳೆಗಳಲ್ಲಿ ಇಟ್ಟು ಹುಳುಗಳನ್ನು ಆಕರ್ಷಿಸಿ ನಾಶ ಮಾಡಬೇಕು.
ಆದ್ದರಿಂದ ಮೇಲೆ ವಿವರಿಸಿದ ಬೇಸಾಯ, ನೈಸರ್ಗಿಕ, ಜೈವಿಕ ಮತ್ತು ರಸಾಯನಿಕ ಕ್ರಮಗಳನ್ನು ಸಮಗ್ರವಾಗಿ ಉಪಯೋಗಿಸಿ ಫಾಲ್ ಸೈನಿಕ ಹುಳುವಿನ ಬಾಧೆಯನ್ನು, ಬೇರೆ ಬೆಳೆಗಳಿಗೆ ಮತ್ತು ಹೊಲಗಳಿಗೆ ಹರಡುವುದನ್ನು ನಿಯಂತ್ರಿಸಬಹುದು.

ಸೈನಿಕ ಹುಳು ಬಾಧೆಯ ಲಕ್ಷಣಗಳು ಸೈನಿಕ ಹುಳು ಬಾಧೆಯ ಲಕ್ಷಣಗಳು

 



ದ್ವಿದಳ ಧಾನ್ಯ ಬೆಳೆ ಅಂತರ ಬೇಸಾಯ ವಿಷ ಪಾಷಾಣು ಎಲೆಯ ಸುಳಿಯಲ್ಲಿ ಹಾಕುವುದು

 

 

Published On: 24 July 2019, 08:33 PM English Summary: Symptoms of fall mite infection and comprehensive management practices in bovine corn

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.