ಧಾರವಾಡ: ನಗರದ ಸಾದುನವರ ಎಸ್ಟೇಟ್ನ ಶಿವಕುಮಾರ ಮಠದ ಎನ್ನುವವರು ಆನ್ಲೈನ ಮೂಲಕ, ಹರಿಯಾಣದ ಸೋಮಾನುವಾ ಹೋಮ್ ಇನೊವೇಷನ್ ರವರಿಂದ ರೂ.5,399/- ಹಣ ಸಂದಾಯ ಮಾಡಿ ಗೀಜರ್ ದಿ:25-10-2021 ರಂದು ಖರೀದಿಸಿದ್ದರು.
ಕೇವಲ 15-20 ದಿವಸದಲ್ಲಿ ಆ ಗೀಜರ್ ದೋಷಪೂರಿತ ಅಂತಾ ಕಂಡು ಬಂದ್ದುದರಿಂದ ಈ ಬಗ್ಗೆ ದೂರುದಾರ ಆ ಕಂಪನಿಯವರಿಗೆ ಮೇಲ್ ಮೂಲಕ ದೂರು ಕೊಟ್ಟಿದ್ದರು.
2-3 ಸಾರಿ ರಿಪೇರಿ ಮಾಡಿದರೂ ಗೀಜರ್ ಸರಿಯಾಗಿರಲಿಲ್ಲ. ಎದುರುದಾರರು ಬೇರೆ ಗೀಜರ್ ಕೊಡುತ್ತೇವೆ ಅಂತಾ ಹೇಳಿ ಕೊಟ್ಟಿರಲಿಲ್ಲ. ಹಾಗಾಗಿ ಎದುರುದಾರರಿಂದ ಸೇವಾ ನ್ಯೂನ್ಯತೆ ಆಗಿ ತನಗೆ ಮೋಸವಾಗಿದೆ ಅಂತಾ ಹೇಳಿ ದೂರುದಾರ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
PM Kisan Samman 14 ನೇ ಕಂತು: ಈ ಪ್ರಕ್ರಿಯೆ ಪೂರ್ಣಗೊಳಿಸಿದವ್ರಿಗಷ್ಟೆ!
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ವಾರಂಟಿ ಅವಧಿಯಲ್ಲಿ ಗೀಜರ್ ದೋಷಪೂರಿತ ಅಂತಾ ಕಂಡು ಬಂದಿದ್ದರಿಂದ ಮತ್ತು ದೂರು ಕೊಟ್ಟರೂ ಆ ದೋಷವನ್ನು ಸರಿಪಡಿಸದೇ ಅಥವಾ ಗೀಜರ್ ಬದಲಾಯಿಸದೇ ಎದುರುದಾರರ ಕಂಪನಿಯವರು ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಪಿಎಂ-ಕಿಸಾನ್ ಯೋಜನೆ ಬಿಗ್ ಅಪ್ಡೇಟ್ : ಫಲಾನುಭವಿಗಳು ಗಮನಿಸಲೇಬೇಕಾದ ಮಹತ್ವದ ಮಾಹಿತಿ
ಅದಕ್ಕಾಗಿ ಗೀಜರ್ನ ಮೌಲ್ಯ ರೂ.5,399/- ಗಳನ್ನು ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರನಿಗೆ ಕೊಡುವಂತೆ ಹಾಗೂ ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ತೊಂದರೆಗಾಗಿ ರೂ.15,000/- ಪರಿಹಾರ ಮತ್ತು ರೂ.5,000/- ಈ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಗೀಜರ್ ಕಂಪನಿಗೆ ಆದೇಶಿಸಲಾಗಿದೆ.
Share your comments