1. ಸುದ್ದಿಗಳು

ಕೊರೊನಾ ಓಮಿಕ್ರಾನ್ ರೂಪಾಂತರ ತಳಿ ಪ್ರಬಲವಾಗಿ ಹರಡುತ್ತಿರುವ ದೇಶಗಳಿವು!

KJ Staff
KJ Staff
ಸಂದರ್ಭಿಕ ಚಿತ್ರ

ಕಟ್ಟೆಚ್ಚರ ವಹಿಸುವಂತೆ ಜಗತ್ತಿನ ಎಲ್ಲಾ ದೇಶಗಳ ಸರ್ಕಾರಗಳಿಗೆ ವಿಶ್ವ ಅರೋಗ್ಯ ಸಂಸ್ಥೆ ಸಲಹೆ

ಮೊದಲ ಬಾರಿ ದೂರದ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡು, ಇದೀಗ ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿರುವ ಓಮಿಕ್ರಾನ್ ರೂಪಾಂತರಿ ತಳಿ, ಅತ್ಯಂತ ವೇಗವಾಗಿ ಹರಡುತ್ತಿದೆ. 2019ರ ಅಂತ್ಯ ಹಾಗೂ 2020ರ ಆರಂಭದಲ್ಲಿ ಕೊರೊನಾ ವೈರಸ್ ಹರಡಲು ತೋರಿದ್ದ ವೇಗವನ್ನೇ ಈ ಅಪಾಯಕಾರಿ ರೂಪಾಂತರಿ ಕೂಡ ತೋರುತ್ತಿರುವುದು ಹಲವು ದೇಶಗಳ ನಾಯಕರ, ಸರಕಾರಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

ಓಮಿಕ್ರಾನ್ ಈಗ ಜಗತ್ತಿನ ಹತ್ತು ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದ್ದು, ಪ್ರಮುಖವಾಗಿ ಅಮೆರಿಕ, ದಕ್ಷಿಣ ಆಫ್ರಿಕಾ ಹಾಗೂ ಇತರ ಸೋಂಕಿತ ರಾಷ್ಟçಗಳಿಂದ ಬೇರೆ ಬೇರೆ ದೇಶಗಳಿಗೆ ಹೋಗುತ್ತಿರುವ ಪ್ರಯಾಣಿಕರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ದೇಶದ ಪ್ರತಿ ವಿಮಾನ ನಿಲ್ದಾಣದಲ್ಲೂ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಹಾಗಾದರೆ ಈ ಕೊರೊನಾ ರೂಪಾಂತರಿ ವೈರಸ್ ಭಾರತಕ್ಕೆ ಬರುವ ಅಪಾಯ ಇದೆಯಾ? ಸಧ್ಯಕ್ಕಂತೂ ಇಲ್ಲ. ಆದರೆ ಏರ್‌ಪೋರ್ಟ್ ಗಳಲ್ಲಿ ತಪಾಸಣೆ ನಡೆಸುವ ಸಿಬ್ಬಂದಿ ಎಚ್ಚರ ತಪ್ಪಿದರೆ ಶೀಘ್ರದಲ್ಲೇ ನಮ್ಮಲ್ಲಿ ಕೊರೊನಾ ಓಮಿಕ್ರಾನ್ ಮೂರನೇ ಅಲೆ ಎಬ್ಬಿಸಲಿದೆ. ಜತೆಗೆ ಲಾಕ್‌ಡೌನ್, ಸೀಲ್‌ಡೌನ್‌ಗಳ ಸರಮಾಲೆ ಆರಂಭವಾಗುವ ಸಾಧ್ಯತೆ ಇದೆ.

ಓಮಿಕ್ರಾನ್ ಹರಡುತ್ತಿರುವ ವೇಗ ಗಮನಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ), ಇದೀಗ ಕೊರೊನಾ ಓಮಿಕ್ರಾನ್ ಹರಡುತ್ತಿರುವ ದೇಶಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಈ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಇತರೆ ರಾಷ್ಟ್ರಗಳು ತೀವ್ರ ನಿಗಾ ವಹಿಸುವಂತೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಕಠಿಣ ತಪಾಸಣೆ ನಡೆಸುವಂತೆ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ಓಮಿಕ್ರಾನ್ ಎಂಬ ಕೊರೊನಾದ ನೂತನ ತಳಿ 28ಕ್ಕೂ ಹೆಚ್ಚು ರೂಪಾಂತರ ಪಡೆಯಬಹುದು ಎನ್ನಲಾಗಿದೆ. ಹೀಗಾಗಿ ಇದೊಂದು ತೀವ್ರ ಸ್ವರೂಪದ ಸಾಂಕ್ರಾಮಿಕ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಜೊತೆಗೆ ಎಲ್ಲಾ ದೇಶಗಳು ಅಲರ್ಟ್ ಆಗಿರುವಂತೆ ಸೂಚ್ಯವಾಗಿ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರ ಹೊಂದಿರುವ ಈ ವೈರಸ್ ತಳಿ ಇತರ ದೇಶಗಳಿಗೆ ಬಹುಬೇಗನೆ ವ್ಯಾಪಿಸಿರುವುದರಿಂದ ದ.ಆಫ್ರಿಕಾ ಸೇರಿ ಹನ್ನೆರಡು ರಾಷ್ಟ್ರಗಳ ವಿಮಾನಗಳ ಮತ್ತು ಪ್ರಯಾಣಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ಹಲವು ರಾಷ್ಟ್ರಗಳು ಚಿಂತನೆ ನಡೆಸಿವೆ. ಕೆಲವು ದೇಶಗಳು ಓಮಿಕ್ರಾನ್ ಪ್ರಕರಣ ದೃಢಪಟ್ಟಿರುವ ರಾಷ್ಟ್ರಗಳ ಜತೆಗಿನ ವಿಮಾನ ಸಂಪರ್ಕವನ್ನು ಸ್ಥಗಿತಗೊಳಿಸಿವೆ. ಈ ನಿಟ್ಟಿನಲ್ಲಿ ಭಾರತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.

ಓಮಿಕ್ರಾನ್ ತಳಿಗೆ ಇರುವ ಹರಡುವಿಕೆ ಸಾಮರ್ಥ್ಯ, ಕಾಯಿಲೆಯ ತೀವ್ರತೆ, ಕೋವಿಡ್ ಲಸಿಕೆ, ಪರೀಕ್ಷೆ ಹಾಗೂ ಚಿಕಿತ್ಸೆ ವಿರುದ್ಧದ ಪರಿಣಾಮಗಳ ಬಗ್ಗೆ ತಿಳಿಯಲು ಇನ್ನು ಕೆಲವು ದಿನ ಬೇಕಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಾಗಾದರೆ ಡಬ್ಲುಎಚ್‌ಒ ಬಿಡುಗಡೆ ಮಾಡಿರುವ ಓಮಿಕ್ರಾನ್ ಅಲರ್ಟ್ ಪಟ್ಟಿಯಲ್ಲಿ ಯಾವ ಯಾವ ದೇಶಗಳಿವೆ ನೋಡೋಣ ಬನ್ನಿ.

ಓಮಿಕ್ರಾನ್ ಪ್ರಕರಣ ದೃಢಪಟ್ಟ ದೇಶಗಳು

ದಕ್ಷಿಣ ಆಫ್ರಿಕಾ

ಓಮಿಕ್ರಾನ್ ವೈರಸ್‌ಗೆ ಮೊದಲು ಸಾಕ್ಷಿಯಾದ ದಕ್ಷಿಣ ಆಫ್ರಿಕಾದ ನಾರ್ತ್ ವೆಸ್ಟ್, ಗೌಟೆಂಗ್ ಮತ್ತು ಲಿಂಪೊಪಾದಲ್ಲಿ ನಿರಂತರವಾಗಿ ಓಮಿಕ್ರಾನ್ ಪ್ರಕರಣಗಳು ವರದಿಯಾಗುತ್ತಿವೆ. ಇದುವರೆಗೆ ದೃಢಪಟ್ಟಿರುವ ಪ್ರಕರನಗಳ ಪೈಕಿ ಶೇ.89ರಷ್ಟು ಗೌಟೆಂಗ್‌ನಲ್ಲೇ ವರದಿಯಾಗಿದ್ದು, ಆ ನಗರರದಲ್ಲಿ ದಿಗ್ಬಂಧನ ವಿಧಿಸಲಾಗಿದೆ.

ಅಮೆರಿಕ

ಇದುವರೆಗೆ ಕೊರೊನಾ ರೂಪಾಂತರ ಓಮಿಕ್ರಾನ್ ವೈರಸ್ ಆತಂಕದಿAದ ದೂರ ಉಳಿದಿದ್ದ ಅಮೆರಿಕದಲ್ಲೂ ಇದೀಗ ರೂಪಾಂತರ ವೈರಸ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ದೇಶದಲ್ಲಿ ಇನ್ನೂ ಹೊಸ ವೈರಸ್ ಪತ್ತೆಯಾಗಿಲ್ಲ. ಆದರೂ ನಾವು ಕಟ್ಟೆಚ್ಚರ ವಹಿಸಿದ್ದೇವೆ ಎಂದು ಗವರ್ನರ್ ಕ್ಯಾತಿ ಹೋಚುಲ್ ತಿಳಿಸಿದ್ದರೆ.

ಗ್ರೇಟ್‌ಬ್ರಿಟನ್

ಇಂಗ್ಲೆAಡ್ ಅಥವಾ ಗ್ರೇಟ್‌ಬ್ರಿಟನ್‌ನಲ್ಲಿ ಓಮಿಕ್ರಾನ್ ವೈರಸ್ ರೂಪಾಂತರದ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಖಚಿತಪಡಿಸಿದೆ. ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಿದ್ದ ಇಬ್ಬರಲ್ಲಿ ಹೊಸ ತಳಿ ಸೋಂಕು ಕಾಣಿಸಿಕೊಂಡಿರುವುದಾಗಿ ಬ್ರಿಟಿಷ್ ಆರೋಗ್ಯ ಸಚಿವ ಸಾಜಿದ್ ಜಾವೇದ್ ತಿಳಿಸಿದ್ದಾರೆ.

ಹಾಂಕಾಂಗ್

ದಕ್ಷಿಣ ಆಫ್ರಿಕಾದ ಬಳಿಕ ಓಮಿಕ್ರಾನ್ ತಳಿಯ ವೈರಸ್ ಪತ್ತೆಯಾದದ್ದು ಹಾಂಕಾಂಗ್ ನಲ್ಲಿ. ಆ ದೇಶದ ಇಬ್ಬರು ಪ್ರಜೆಗಳಲ್ಲಿ ಈ ಹೊಸ ತಳಿ ಸೋಂಕು ದೃಢಪಟ್ಟಿತ್ತು. ಹೀಗಾಗಿ ಹಲವು ರಾಷ್ಟçಗಳು ಹಾಂಕಾಂಗ್ ಜತೆಗಿನ ವಿಮಾನಯಾನ ಸಂಪರ್ಕ ಸ್ಥಗಿತಗೊಳಿಸಿವೆ.

ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾದಿಂದ ದ್ವೀ ರಾಷ್ಟ್ರ ಆಸ್ಟೆçÃಲಿಯಯಾಗೆ ವಾಪಸಾಗಿರುವ ಇಬ್ಬರು ಪ್ರಯಾಣಿಕರಲ್ಲಿ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಆಸೀಸ್‌ನ ಪ್ರಮುಖ ನಗರ ಸಿಡ್ನಿಯ ಇಬ್ಬರಲ್ಲಿ ಹೊಸ ಮಾದರಿ ವೈರಸ್ ಇರುವುದು ಪತ್ತೆಯಾಗಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜರ್ಮನಿ

ಜರ್ಮನಿಯಲ್ಲಿ ಪತ್ತೆಯಾಗಿರುವ ಹೊಸ ತಳಿಯ ಪ್ರಕರಣಗಳಿಗೂ ದಕ್ಷಿಣ ಆಫ್ರಿಕಾ ನಂಟಿದೆ. ನ.24ರಂದು ದ.ಆಫ್ರಿಕಾದಿಂದ ವಿಮಾನದಲ್ಲಿ ಜರ್ಮನಿಗೆ ಬಂದ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಈ ಕುರಿತಂತೆ ಪರೀಕ್ಷೆ ವರದಿ ಇನ್ನೂ ಬಂದಿಲ್ಲವಾದರೂ, ಇದು ಹೊಸ ತಳಿ ಸೋಂಕು ಎಂಬ ಬಗ್ಗೆ ಅನುಮಾನ ಇಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಟಲಿ

ಪೂರ್ವ ಆಫ್ರಿಕಾದ ಮೊಜಾಂಬಿಕ್ ರಾಷ್ಟ್ರಕ್ಕೆ ತೆರಳಿದ್ದ ಇಟಲಿಯ ಪ್ರಜೆಯಲ್ಲಿ ಓಮಿಕ್ರಾನ್ ಪಾಸಿಟಿವ್ ಪತ್ತೆಯಾಗಿದೆ. 40ರ ಆಸುಪಾಸಿನ ವ್ಯಕ್ತಿಗೆ ರೂಪಾಂತರ ವೈರಸ್ ಸೋಂಕು ತಗುಲಿದೆ ಎನ್ನಲಾಗಿದ್ದು, ಆತನೊಂದಿಗೆ ಪ್ರಯಾಣಿಸಿದ್ದ ಇಬ್ಬರು ಮಕ್ಕಳು ಸೇರಿ ಐವರಲ್ಲಿ ಕೊರೊನಾ ಪಾಸಿಟಿವ್ ಕಂಡುಬAದಿದೆ. ಉಳಿದಂತೆ ನೆದರ್‌ಲ್ಯಾಂಡ್, ಇಸ್ರೇಲ್, ಆಫ್ರಿಕಾದ ಬೋಟ್ಸ್ ವಾನಾ ಮತ್ತು ಬೆಲ್ಜಿಯಂ ದೇಶಗಳಲ್ಲಿ ಓಮೆಕ್ರಾನ್ ಇರುವಿಕೆ ಪತ್ತೆಯಾಗಿದ್ದು, ಈ ಎಲ್ಲಾ ದೇಶಗಳಲ್ಲೂ ಹೈ ಅಲರ್ಟ್ ಘೋಷಿಸಿದಲಾಗಿದೆ.

Published On: 29 November 2021, 11:21 AM English Summary: these are the major countries where the corona omicron spreading strongly

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.