ಈಗಾಗಲೇ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ರೈತರು, ಜನ ಸಾಮಾನ್ಯರು ಮಳೆಯನ್ನು ಖುಷಿಯಿಂದ ಸ್ವಾಗತಿಸಿದ್ದಾರೆ. ಇದರ ನಡುವೆ ಕೆಲವೊಮ್ಮೆ ಜೋರಾದ ಮಳೆ ಸಮಯದಲ್ಲಿ ಗುಡುಗು ಸಿಡಿಲು ಬರುವುದು ಸರ್ವೇ ಸಾಮಾನ್ಯ. ಸಿಡಿಲು ಬಡಿದು ಎಷ್ಟೊ ಸಾವು- ನೋವುಗಳು ಆಗುವುದು ಕೂಡ ನಮಗೆಲ್ಲ ತಿಳಿದಿದೆ.
ಇಂಥ ಸಿಡಿಲಿನ ಕುರಿತು ಅಡ್ವಾನ್ಸ್ ಮಾಹಿತಿ ನೀಡುವಂಥ ಮೊಬೈಲ್ ಆಪ್ (Mobile App) ಒಂದನ್ನು ಈಗಾಗಲೇ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ತಯಾರಿಸಿದೆ.
ಹೌದು! ಸಿಡಿಲಿನಿಂದ ಪಾರಾಗಲು ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯ ಅಧೀನದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿಪಡಿಸಿರುವ ʼದಾಮಿನಿʼ (Damini App) ನಿಮಗೆಲ್ಲ ಸಹಾಯ ಮಾಡಲಿದೆ.
ಇದನ್ನೂ ಓದಿರಿ:
ಬೇಸಿಗೆಯಲ್ಲಿ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆಯೇ..? ಈ ಟ್ರಿಕ್ಸ್ ಬಳಸಿ.. ಹಣ ಉಳಿಸಿ
ಸಿಡಿಲು ಹೊಡೆಯುವ ಕೆಲವು ನಿಮಿಷಗಳ ಮುಂಚೆ ಈ ಆ್ಯಪ್ ಮುನ್ಸೂಚನೆ ನೀಡಲಿದೆ. ಸಾವು, ನೋವಿನ ಪ್ರಮಾಣ ತಗ್ಗಿಸಲು ನೆರವಿಗೆ ಬರಲೆಂದು ಈ ಆಪ್‌ನ್ನು ತಯಾರಿಸಲಾಗಿದೆ. ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಸಿಡಿಲಿನ ಅನಾಹುತ ತಪ್ಪಿಸಲು ಸಿಡಿಲು ಪತ್ತೆಹಚ್ಚುವ ಸಂವೇದಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದೆ.
ಈ ಮೂಲಕ ಒಂದು ಸ್ಥಳದ ಸುತ್ತಲಿನ 20 ರಿಂದ 40 ಕಿ.ಮೀ. ದೂರದವರೆಗೆ 15 ನಿಮಿಷಗಳ ಒಳಗೆ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ.
ಸುಸ್ಥಿರ ಕೃಷಿಯಲ್ಲಿ ಸಲ್ಫರ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಏಕೆ ಬೇಕು?
PM ಕಿಸಾನ್ ರೈತರಿಗೆ ಬಿಗ್ ನ್ಯೂಸ್: OTP ಮೂಲಕ ಆಧಾರ್ ಕಾರ್ಡ್ e-KYC ರದ್ದು..
ಈ ಮಾಹಿತಿ ಆಧರಿಸಿ, ಜನಸಾಮಾನ್ಯರು ಸುರಕ್ಷಿತವಾದ ಸ್ಥಳಗಳಿಗೆ ತೆರಳಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಆ್ಯಪ್ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿಈ ಸಂವೇದಕಗಳ ಸಂಖ್ಯೆ ಹೆಚ್ಚಿಸಿ, ಸಿಡಿಲಿನ ಮೂನ್ಸೂಚನೆಯ ನಿಖರವಾದ ಮಾಹಿತಿ ನೀಡಲು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಪ್ರಯತ್ನ ಮಾಡಲಿದೆ.
ಈ ಆ್ಯಪ್‌ನ್ನು ಬಳಸುವ ವಿಧಾನ
ಈ ಆ್ಯಪ್‌ನ್ನು Google Play Store ನಿಂದ Install ಮಾಡಿಕೊಳ್ಳಬೇಕು. ಬಳಕೆದಾರರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್ ಕೋಡ್, ಮತ್ತು ವೃತ್ತಿಯನ್ನು ನಮೂದಿಸಬೇಕು. ಬಳಿಕ ಹೊಮ್ ಪೇಜ್‌ನಲ್ಲಿ ಒಂದು ನಕ್ಷೆ ತೋರುತ್ತದೆ. ಅದರ ಮೇಲ್ಭಾಗದಲ್ಲಿ ನಮಗೆ ಬೇಕಾದ ಸ್ಥಳದ ಹೆಸರು ಟೈಪ್‌ಮಾಡಿ ಸರ್ಚ್ ಮಾಡಬೇಕು.
6% ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಪಡೆಯುವುದು ಹೇಗೆ..? ಯಾರು ಅರ್ಹರು..?
ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!
ಆ್ಯಪ್‌ನಲ್ಲಿ ಮಿಂಚನ್ನು ಗುರುತಿಸಲು 3 ಸಂಕೇತಗಳಿವೆ.
- 1. ಹಳದಿ ಬಣ್ಣದ ಮಿಂಚಿನ ಚಿಹ್ನೆ ತೋರಿಸಿದರೆ 5 ನಿಮಿಷದೊಳಗೆ ಮಿಂಚು ಸಂಭವಿಸುವುದನ್ನು ಸೂಚಿಸುತ್ತದೆ.
- 2. ನೀಲಿ ಬಣ್ಣದ ಚಿಹ್ನೆ 5 ರಿಂದ 10ನಿಮಿಷಗಳವರೆಗೆ ಸಂಭವಿಸಬಹುದಾದ ಮಿಂಚನ್ನು ಸೂಚಿಸುತ್ತದೆ.
- 3. ನೇರಳೆ ಬಣ್ಣದ ಚಿಹ್ನೆ 10ರಿಂದ 15ನಿಮಿಷಗಳವರೆಗೆ ಸಂಭವಿಸಬಹುದಾದ ಮಿಂಚನ್ನು ಸೂಚಿಸುತ್ತದೆ.
ಇಷ್ಟೇ ಅಲ್ಲದೆ ಮಿಂಚು, ಸಿಡಿಲಿನ ವೇಳೆ ಜನಸಾಮಾನ್ಯರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಯಾವ ಸ್ಥಳಗಳಲ್ಲಿ ಇರಬಾರದು ಎಂಬ ಮಾತಿಯ ಜತೆಗೆ ಮಿಂಚು ಹೊಡೆದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ವಿವರವನ್ನೂ ಈ ಆ್ಯಪ್‌ನಲ್ಲಿಅಳವಡಿಸಿರುವುದು ವಿಶೇಷ.
TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?
Green Peas: ʻಹಸಿರು ಬಟಾಣೆʼ ಸೇವನೆಯ ಅದ್ಭುತ ಪ್ರಯೋಜನಗಳೇನು..? ಇಲ್ಲಿದೆ ಮಾಹಿತಿ
Share your comments