1 – One
ಇಂದು ವಿಶ್ವ ಮಣ್ಣಿನ ದಿನ. ಇಡಿ ಜಗತ್ತಿಗೆ ಅನ್ನ ನೀಡುವ ಭೂಮಿತಾಯಿ ಮಣ್ಣನ್ನು ನೆನೆಯುವ ದಿನ. "ಅನ್ನದ ಮೂಲ ಮಣ್ಣು: ಆಹಾರ ಇಲ್ಲಿಂದ ಪ್ರಾರಂಭ" ಎನ್ನುವ ಥೀಮ್ನೊಂದಿಗೆ 2022ರ ವಿಶ್ವ ಮಣ್ಣು ದಿನವನ್ನ ಆಚರಿಸಲಾಗುತ್ತಿದೆ.
ಈ ಮೂಲಕ ಮಣ್ಣಿನ ನಿರ್ವಹಣೆಯಲ್ಲಿ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸುವುದು. ಮಣ್ಣಿನ ಅರಿವನ್ನು ಹೆಚ್ಚಿಸುವ ಮತ್ತು ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಸಮಾಜವನ್ನು ಉತ್ತೇಜಿಸುವುದು.
ಆರೋಗ್ಯಕರ ಪರಿಸರ ವ್ಯವಸ್ಥೆ ಕಾಪಾಡಿಕೊಳ್ಳಲು ಮಣ್ಣಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಲಾಗಿದೆ.
2002ರಲ್ಲಿ ಅಂತರರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟವು ಪ್ರತಿ ವರ್ಷ ಡಿಸೆಂಬರ್ 5 ರಂದು “ವಿಶ್ವ ಮಣ್ಣಿನ ದಿನವನ್ನು” ಆಚರಿಸಲು ಶಿಫಾರಸು ಮಾಡಿತ್ತು.
2 - Two
ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳಿಸಲು ಸಮ್ಮತಿ ಸೂಚನೆ ನೀಡಲಾಗಿದೆ.
ಕಳೆದ ಐದು ತಿಂಗಳ ಹಿಂದೆ ರಿಸರ್ವ್ ಬ್ಯಾಂಕ್ನ ಮುಂದೆ ರೈತರು ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘ ಪ್ರತಿಭಟನೆ ನಡೆಸಿತ್ತು.
ರೈತರಿಗೆ ಕೃಷಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಮಾನದಂಡ ಪರಿಗಣಿಸಬಾರದು. ಕೃಷಿ ಸಾಲಗಳಿಗೆ ನೀಡುವ ರೈತರ ಎಲ್ಲ ಸಾಲದ ಬಡ್ಡಿ ಶೇಕಡ 1ಕ್ಕೆ ಇಳಿಸಬೇಕು.
ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ವಲಯವಾದ ಕಾರಣ, ಕಿಸಾನ್ ಯೋಜನೆ, ಬೆಳೆವಿಮೆ, ಹಾಲು ಮಾರಾಟ ಸಹಾಯಧನ ಇತರೆ ಸಹಾಯಧನವನ್ನು
ಬೇರೆ ಹಳೆಯ ಸಾಲಗಳಿಗೆ ಜಮಾ ಮಾಡಬಾರದು ಎಂದು ಒತ್ತಾಯಿಸಲಾಯಿತು.
ರೈತಮಕ್ಕಳ ವಿದ್ಯಾಭ್ಯಾಸ ಸಾಲವನ್ನು ನೀಡುವಾಗ ಪೋಷಕರ ಸಿಬಿಲ್ ಸ್ಕೋರ್ ಬಾಕಿ ಸಾಲಕ್ಕೆ ಲಿಂಕ್ ಮಾಡಬಾರದು. ಕೃಷಿ ಉಪಕರಣಗಳಿಗೆ ನೀಡಿದ ಸಾಲಗಳಿಗೆ ಮರುಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡಬೇಕು.
ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳನ್ನು ಪ್ರಾರಂಭಿಸುವ ರೈತರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿ ಪ್ರೋತ್ಸಾಹಿಸಬೇಕು ಎಂದು ರೈತರು ಒತ್ತಾಯಿಸಿದರು.
3 - Three
ರಾಜ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ 44 ಅರ್ಜಿಗಳು ಸಲ್ಲಿಕೆ ಆಗಿವೆ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ಹೊಸ ಕಾರ್ಖಾನೆಗಳ ಸ್ಥಾಪನೆಯಿಂದಾಗಿ 15ಸಾವಿರ ಕೋಟಿ ಹೂಡಿಕೆ ಆಗಲಿದೆ ಎಂದಿದ್ದಾರೆ.
ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕಾರ್ಖಾನೆ ಸ್ಥಾಪನೆಗೆ ಅನುಮತಿ ಕೋರಲಾಗಿದೆ.
ಅರ್ಜಿಗಳನ್ನು ಪರಿಶೀಲನೆ ಮಾಡಿ ನಂತರದ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 78 ಸಾವಿರ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲ ಸಕ್ಕರೆ ಕಾರ್ಖಾನೆಯ ರೈತರಿಗೆ ಬಾಕಿ ಹಣವನ್ನು ಪಾವತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
4 - Four
ರಸ್ತೆ ಬದಿ ಸಂಚರಿಸುವಾಗ ಆನೆಗಳಿಗೆ ಕಬ್ಬು ನೀಡಿದ ಕಾರಣಕ್ಕೆ ಕರ್ನಾಟಕದ ಲಾರಿ ಚಾಲಕನೋರ್ವನಿಗೆ ತಮಿಳುನಾಡಿನ ಅರಣ್ಯ ಇಲಾಖೆ 75 ಸಾವಿರ ದಂಡ ವಿಧಿಸಿದೆ.
ಕಬ್ಬು ತುಂಬಿಕೊಂಡು ಸಂಚರಿಸುವ ಕೆಲವು ಲಾರಿಗಳು ರಸ್ತೆ ಮಧ್ಯೆ ಆನೆಗಳಿಗೆ ಕಬ್ಬು ನೀಡಿವೆ.
ಇದರಿಂದಾಗಿ ಆನೆಗಳಿಗೆ ಕಬ್ಬಿನ ರುಚಿ ಲಭಿಸಿದ್ದು, ರಸ್ತೆ ಪರಿಸರದಲ್ಲೇ ಹೆಚ್ಚು ಓಡಾಡಿಕೊಂಡಿವೆ. ಇದು ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಅಷ್ಟೆ ಅಲ್ಲದೇ ಆನೆಗಳ ಜೀವಕ್ಕೂ ಅಪಾಯವಾಗುವ ಸಂಭವವಿರುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ತಮಿಳುನಾಡಿನ ಅರಣ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸಲು ಮುಂದಾಗಿದೆ.
ಅಸನೂರು ಭಾಗದ ಅರಣ್ಯಾಧಿಕಾರಿ ಶಿವಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಪ್ಯಾಟ್ರೋಲಿಂಗ್ ನಡೆಸುತ್ತಿದ್ದಾರೆ.
ಈ ವೇಳೆ ಕಬ್ಬಿನ ಲಾರಿಯ ಮೇಲೆ ನಿಂತು ಆನೆಗೆ ಕಬ್ಬು ಎಸೆಯುತ್ತಿದ್ದ ಕರ್ನಾಟಕದ ಲಾರಿ ಚಾಲಕನೊಬ್ಬ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಆತನನ್ನು ವಿಚಾರಣೆ ನಡೆಸಿ 75,000 ರೂ. ದಂಡ ವಿಧಿಸಿದ್ದಾರೆ.
5 - Five
ರಾಜ್ಯದಲ್ಲಿ ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡಬೇಕು ಮತ್ತು ಕಬ್ಬಿನ ಬಾಕಿ ವಸೂಲಿ ಮಾಡಬೇಕು
ಎಂದು ಆಗ್ರಹಿಸಿ ರೈತರು ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ.
ಈ ನಡುವೆಯೇ ಕಬ್ಬು ನಿಯಂತ್ರಣ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ಸೋಮವಾರ ಸಭೆ ಕರೆಯಲಾಗಿದೆ.
ಕಬ್ಬು ನಿಯಂತ್ರಣ ಮಂಡಳಿಯ ಸಭೆಯನ್ನು ಮಂಡಳಿಯ ಅಧ್ಯಕ್ಷರು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ
ಇಂದು ಮಧ್ಯಾಹ್ನ 4ಕ್ಕೆ ನಡೆಸಲಾಗುತ್ತಿದೆ.
ಸಭೆಯನ್ನು ವಿಕಾಸಸೌಧದ 3ನೇ ಮಹಡಿಯ ಕೊಠಡಿ ಸಂಖ್ಯೆ 317 ರಲ್ಲಿ ನಡೆಸಲಾಗುವುದು ಎಂದು ತಿಳಿಸಲಾಗಿದೆ.
6 - Six
ಅಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಪ್ರಾಚೀನ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಹೊಲವೊಂದರಲ್ಲಿ ವೈಪ್ಲೈನ್ ಅಗೆಯುತ್ತಿರುವಾಗ ಈ ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಮನುಕೊಂಡ ಸತ್ಯನಾರಾಯಣ ಹಾಗೂ ಮನುಕೊಂಡ ತೇಜಶ್ರೀ ಎಂಬುವವರು
ಕಳೆದ ತಿಂಗಳ 29ರಂದು ಪೈಪ್ ಲೈನ್ ಅಗೆಯುತ್ತಿದ್ದಾಗ ಚಿಣ್ಣದ ನಾಣ್ಯಗಳ ಮುದ್ದೆ ಪತ್ತೆಯಾಗಿತ್ತು.
ಮಣ್ಣಿನ ಪಾತ್ರೆಯಲ್ಲಿರುವ ಚಿನ್ನದ ನಾಣ್ಯಗಳು ತಲಾ 3 ಗ್ರಾಂ ತೂಗಿವೆ.
ಮನುಕೊಂಡ ಸತ್ಯನಾರಾಯಣ ಸುಮಾರು 18 ಚಿನ್ನದ ನಾಣ್ಯಗಳನ್ನು ಕಂದಾಯ ಅಧಿಕಾರಿಗಳ ಖಜಾನೆಗೆ ವರ್ಗಾಯಿಸಿದ್ದಾರೆ.
ಆದರೆ ನಾಣ್ಯಗಳು ಸಿಕ್ಕು 4 ದಿನ ಕಳೆದಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.
ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
7 - Seven
ಕಬ್ಬಿಗೆ ಎಫ್ಆರ್ಬಿ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಿರಂತರವಾಗಿ 13ದಿನ ಪ್ರತಿಭಟನೆ ನಡೆಸಲಾಗಿತ್ತು.
ಇದರ ಫಲವಾಗಿ ಕಬ್ಬು ಮಂಡಳಿ ಸಭೆಯನ್ನು ಕರೆಯಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ
ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಬ್ಬು ಎಫ್ ಆರ್ ಪಿ ದರ ಎರಿಕೆ, ರಾಜ್ಯ ಸಲಹಾ ಬೆಲೆ ನಿಗದಿ, ಕಬ್ಬಿನಿಂದ ಬರುವ ಇತರೆ ಉತ್ಪನ್ನಗಳ ಲಾಭ ಹಂಚಿಕೆ ,
ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಸುಲಿಗೆ ತಪ್ಪಿಸಿ, ಕಬ್ಬಿನ ತೂಕದಲ್ಲಿ ಮೋಸ, ಸಕ್ಕರೆ ಇಳುವರಿಯಲ್ಲಿ ಮೋಸ ತಪ್ಪಿಸಬೇಕು
ಎಂದು ಆಗ್ರಹಿಸಿ 13 ದಿನಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿತ್ತು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ
ಸಕ್ಕರೆ ಸಚಿವರ ಅಧ್ಯಕ್ಷತೆಯಲ್ಲಿ ಕಬ್ಬು ಖರೀದಿ ಮಂಡಳಿ ಸಭೆ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.
8 - Eight
ಕರ್ನಾಟಕದ ಪ್ರಕಾರ ಬೆಳಗಾವಿ ಗಡಿವಿವಾದ ಮುಗಿದುಹೋಗಿರುವ ಅಧ್ಯಾಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಅವರು ಮಾತನಾಡಿದ್ದಾರೆ.
ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವ ಬಗ್ಗೆ ಈಗಿರುವ ವಾತಾವರಣದಲ್ಲಿ ಭೇಟಿ ನೀಡುವುದು ಬೇಡ.
ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಆದಾಗ್ಯೂ ಕೂಡ ಅವರು ಬರುವುದಾಗಿ ತಿಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.
ಅಕಸ್ಮಾತ್ ಬರುವ ಸಾಹಸ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು,
ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೆ ಮುಂದೆ ನೋಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
9 - Nine
ಅಡಿಕೆ ಬೆಳೆಗಾರರು ಕೊಯ್ಲಿನ ನಂತರ ಅಡಿಕೆ ಸಿಪ್ಪೆಯನ್ನು ಪ್ರಮುಖ ಹೆದ್ದಾರಿ, ರಸ್ತೆಗಳ ಬದಿ ರಾಶಿ ಹಾಕುವುದು ವಾಡಿಕೆ.
ಆದರೆ ಸಿಪ್ಪೆಯು ರಸ್ತೆ ತುಂಬ ಹರಡಿ, ಅಪಘಾತಗಳಿಗೆ ಕಾರಣವಾಗುತ್ತಿದೆ.
ಅಡಿಕೆ ಸಿಪ್ಪೆಯ ಪರ್ಯಾಯ ಬಳಕೆ ಕುರಿತು ರೈತರು ಯೋಚಿಸಬೇಕು.
ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸಿ ತೋಟಗಳಿಗೆ ಬಳಸಬಹುದು.
ಹಲವು ಆವಿಷ್ಕಾರಗಳ ಮೂಲಕ ಅದನ್ನು ಸಮರ್ಪಕವಾಗಿ ಬಳಸಬಹುದು.
ಆದರೆ ಈ ಬಗ್ಗೆ ಸಾಕಷ್ಟು ರೈತರಿಗೆ ಮಾಹಿತಿ ಇಲ್ಲ ಎನ್ನಲಾಗಿದೆ.
10 - Ten
ಆಹಾರ ಸಂಸ್ಕರಣಾ ಉದ್ಯಮವನ್ನು ರಾಗಿ ಆಧಾರಿತ ಆಹಾರಗಳ ಮೇಲೆ ಸರ್ಕಾರ ಕೇಂದ್ರಿಕರಿಸುವಂತೆ NITI ಆಯೋಗ್ದ ಸಿಇಒ ಪರಮೇಶ್ವರನ್ ಅಯ್ಯರ್ ಒತ್ತಾಯಿಸಿದರು.
ರಾಷ್ಟ್ರೀಯ ಆಹಾರ ಸಂಸ್ಕರಣಾ ಸಮಾವೇಶ 2022ರಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.
ಜನಸಂಖ್ಯೆಯ ಮತ್ತು ಆರ್ಥಿಕತೆಯ ಯೋಗಕ್ಷೇಮಕ್ಕೆ ಆಹಾರ ಸಂಸ್ಕರಣೆಯು ನಿರ್ಣಾಯಕವಾಗಿದೆ.
ಇದು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು. ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ. ನಮಸ್ಕಾರ…
Share your comments