ಸಂಚಾರ ನಿಯಮ ಉಲ್ಲಂಘನೆ ದಂಡ ರಿಯಾಯಿತಿ: 35.60 ಲಕ್ಷ ಪ್ರಕರಣ ಇತ್ಯಾರ್ಥ, ಎಷ್ಟು ಕೋಟಿ ದಂಡ ಸಂಗ್ರಹ, ಏನೆಲ್ಲ ಲಾಭವಾಯ್ತು ಇಲ್ಲಿದೆ ಸಮಗ್ರ ವರದಿ!
Pension Scheme Latest Updates: ಪಿಂಚಣಿ ಯೋಜನೆ ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿಸುದ್ದಿ!
ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿಯಲ್ಲಿ ಶೇ50ರಷ್ಟು ರಿಯಾಯಿತಿ ನೀಡಿದ್ದರಿಂದ ಲಕ್ಷಾಂತರ ಪ್ರಕರಣಗಳು ಇತ್ಯಾರ್ಥವಾಗಿದ್ದು, ಕೋಟ್ಯಾಂತರ ರೂಪಾಯಿ ವಸೂಲಿ ಆಗಿದೆ.
ಒಂದು ಸಣ್ಣ ನಿರ್ಧಾರದಿಂದ ಹಲವು ಉಪಯೋಗಗಳು ಆಗಿವೆ. ಅಲ್ಲದೇ ಸಾವಿರಾರು ಜನರು ತಾವೇ ಬಂದು ದಂಡ ಪಾವತಿಸಿ ನಿರಾಳರಾಗಿದ್ದಾರೆ.
ನಿಯಮ ಉಲ್ಲಂಘಿಸಿದವರೂ ಹಾಗೂ ಕೋರ್ಟ್‌ನಲ್ಲಿ ನಿರ್ದಿಷ್ಟ ದಿನಾಂಕದ ವರೆಗೆ ಪ್ರಕರಣ ಬಾಕಿ ಇರುವವರಿಗೆ ದಂಡ ಪಾವತಿಯಿಂದ ಶೇ50ರಷ್ಟು ರಿಯಾಯಿತಿಯನ್ನು ನೀಡಲಾಗಿತ್ತು.
Gst ರಾಜ್ಯದಲ್ಲಿ ಜನವರಿಯಲ್ಲಿ ದಾಖಲೆಯ ತೆರಿಗೆ ಸಂಗ್ರಹ!, ಎಷ್ಟು ಇಲ್ಲಿದೆ ವಿವರ
ರಾಜ್ಯ ಸರ್ಕಾರದ ನಿರ್ಧಾರಿದಂದ ಕಳೆದ 9 ದಿನಗಳಲ್ಲಿ ಬರೋಬ್ಬರಿ 102 ಕೋಟಿ ದಂಡ ಸಂಗ್ರಹವಾಗಿದೆ! ಹೌದು ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಯ ಪ್ರಮಾಣವನ್ನು ಶೇ 50ರಷ್ಟು ರಿಯಾಯಿತಿ ನೀಡಿದ್ದರಿಂದ ಆಗಿರುವ ಬದಲಾವಣೆ ಇದು.
ರಿಯಾಯಿತಿಯಿಂದ ದಂಡವಷ್ಟೇ ಸಂಗ್ರಹವಾಗಿಲ್ಲ. ಲಕ್ಷಾಂತರ ಪ್ರಕರಣಗಳು ಇತ್ಯಾರ್ಥವಾಗಿದೆ.
ಅಲ್ಲದೇ ಒಂದೇ ನಂಬರ್ ಪ್ಲೇಟ್ ಅನ್ನು ಅಕ್ರಮವಾಗಿ ಬಳಸುತ್ತಿದ್ದ ಹಲವರ ಸುಳಿವೂ ಪೊಲೀಸರಿಗೆ ಸಿಕ್ಕಿದೆ. ಜನರಿಗೂ ಸಂಚಾರ ನಿಯಮಗಳನ್ನು ಎಲ್ಲೆಲ್ಲಿ ಉಲ್ಲಂಘನೆ ಮಾಡುತ್ತಿದ್ದೇವೆ ಎನ್ನುವುದು ಅರಿವಿಗೆ ಬಂದಿದೆ.
ನಿಯಮ ಉಲ್ಲಂಘಿಸಿದವರಿಗೆ ಡಿಸ್ಕೌಂಟ್; ಓಡೋಡಿ ಬಂದು ದಂಡ ಕಟ್ತಿದ್ದಾರೆ ಜನ: 13.18 ಕೋಟಿ ವಸೂಲಿ!
ಇನ್ನು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಯ ಮೇಲೆ ಘೋಷಿಸಿದ್ದ ಶೇ 50ರಷ್ಟು ರಿಯಾಯಿತಿ ಸೌಲಭ್ಯದ ಅವಧಿ ಶನಿವಾರ ಮುಕ್ತಾಯವಾಗಿದ್ದು, 9 ದಿನಗಳಲ್ಲಿ 102 ಕೋಟಿ ದಂಡ ಸಂಗ್ರಹವಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರದ ಪ್ರಸ್ತಾವನೆಗೆ ಅನುಮತಿ ನೀಡಿದ್ದ ರಾಜ್ಯ ಸರ್ಕಾರ, ರಿಯಾಯಿತಿ ಘೋಷಣೆ ಮಾಡಿತ್ತು. ಫೆ. 3ರಿಂದ ಫೆ. 11ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ದಂಡ ಪಾವತಿಸಿದ್ದಾರೆ. 35.60 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡಿವೆ!
ಸಂಚಾರ ನಿಯಮ ಉಲ್ಲಂಘಿಸಿದ್ದರೆ ಶೇ50ರಷ್ಟು ರಿಯಾಯಿತಿ ಪಾವತಿ ಮಾಡುವುದಕ್ಕೆ ಸಂಬಂಧಿಸಿದಂತೆ ಜನರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶೇ50ರಷ್ಟು ದಂಡ ಕಡಿತವಾದ ಬೆನ್ನಲ್ಲೇ ಸಾವಿರಾರೂ ಜನ ಸರತಿ ಸಾಲಿನಲ್ಲಿ ನಿಂತಂತೆ ಹಲವರು ದಂಡ ಪಾವತಿ ಮಾಡಿದ್ದಾರೆ.
ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಸಂಬಂಧಿಸಿದಂತೆ ರಾಜ್ಯ ಸಾರಿಗೆ ಇಲಾಖೆಯು ಶೇ.50 ರಷ್ಟು ರಿಯಾಯಿತಿ ಘೋಷಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಜನರಿದಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರಾಫಿಕ್ ಪೊಲೀಸ್ ಖಜಾನೆಗೆ ಕೋಟಿ ಕೋಟಿ ರೂಪಾಯಿ ಸಂಗ್ರಹವಾಗಿದೆ.
ಸಾವಿರಾರು ರೂಪಾಯಿ ದಂಡ ಅರ್ಧದಷ್ಟು ಕಡಿಮೆ ಆಗುತ್ತೆ ಎನ್ನುವುದು ತಿಳಿಯುತ್ತಿದ್ದಂತೆಯೇ ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಮುಗಿಬಿದ್ದು, ದಂಡ ಪಾವತಿಸಿದ್ದಾರೆ.
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್‌ನಲ್ಲಿ ಇದ್ದರೆ, ಅಂಥವರಿಗೆ ದಂಡ ಪಾವತಿಯಲ್ಲಿ ಶೇ.50ರಷ್ಟು ವಿನಾಯಿತಿಯನ್ನು ನೀಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ಮಾಡಿದ್ದು, ಇದಕ್ಕೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಫೆ.11ರಂದು ಲೋಕ ಅದಾಲತ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಅವರು ಮನವಿ ಮಾಡಿದ್ದರು.
ಅದರಂತೆ ಶೇ.50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಶೇ.50ರಷ್ಟು ದಂಡ ವಿನಾಯಿತಿ ಫೆ.11ರ ವರೆಗೆ ಇರಲಿದೆ. ಫೆ.11ರ ನಂತರ ಸಂಪೂರ್ಣ ದಂಡ ಪಾವತಿ ಮಾಡಬೇಕಾಗುತ್ತದೆ.
ಸಂಚಾರ ನಿಯಮ ಉಲ್ಲಂಘನೆಯಿಂದ ದಂಡ ಸಂಗ್ರಹವಷ್ಟೇ ಅಲ್ಲ ಹಲವು ಲಾಭಗಳೂ ಆಗಿವೆ. ಅವು ಈ ರೀತಿ ಇವೆ.
35.60 ಲಕ್ಷ ಪ್ರಕರಣ ಇತ್ಯಾರ್ಥ: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಯಲ್ಲಿ ಶೇ50ರಷ್ಟು ವಿನಾಯಿತಿ ನೀಡಿದ ಮೇಲೆ ಕಗ್ಗಂಟಾಗಿದ್ದ ಹಲವು ಪ್ರಕರಣಗಳು ಇತ್ಯಾರ್ಥವಾಗಿದೆ.
ಅಲ್ಲದೇ ಕೋರ್ಟ್‌ನಲ್ಲಿ ಬಾಕಿ ಇದ್ದ ಪ್ರಕರಣಗಳೂ ಇತ್ಯಾರ್ಥವಾಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರು ಅರ್ಧ ದಂಡ ಪಾವತಿಯನ್ನು ಮಾಡಿ ತುಸು ನಿರಾಳರಾಗಿದ್ದಾರೆ.
ಕಳೆದ 9 ದಿನಗಳಲ್ಲಿ ಬರೋಬ್ಬರಿ 35.60 ಲಕ್ಷ ಪ್ರಕರಣಗಳು ಇತ್ಯಾರ್ಥವಾದಂತಾಗಿದೆ. ಈ ಪ್ರಮಾಣದ ಪ್ರಕರಣಗಳನ್ನು ಸಂಚಾರ ಪೊಲೀಸರೇ ಇತ್ಯಾರ್ಥ ಮಾಡಿದ್ದರೆ ಕನಿಷ್ಠ ಮೂರು ತಿಂಗಳಾದರೂ ಬೇಕಾಗುತ್ತಿತ್ತು.
ಸಂಚಾರ ಪೊಲೀಸರೂ ಹಾಗೂ ಜನರ ಸಹಕಾರದಿಂದ ಈ ಪ್ರಮಾಣದ ಪ್ರಕರಣಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ಕಳ್ಳ ಪ್ರಕರಣಗಳು ಪತ್ತೆ!: ಸಂಚಾರ ದಂಡ ಪಾವತಿ ನಿಯಮ ಉಲ್ಲಂಘನೆ ರಿಯಾಯಿತಿ ನೀಡಿದ ಮೇಲೆ ಹಲವು ಕಳ್ಳ ಪ್ರಕರಣಗಳು ಬೆಳಕಿಗೆ ಬಂದಿದೆ. ಒಂದೇ ನಂಬರ್ ಪ್ಲೇಟ್ ಬಳಸಿ ವಾಹನ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಇದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ಸಂಚಾರ ಪೊಲೀಸರು ಈ ರೀತಿಯ ಪ್ರರಣಗಳ ಪತ್ತೆಗೆ ಮುಂದಾಗಿದ್ದಾರೆ.
Share your comments