ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಗೋಧಿಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ಆದರೆ ಈ ನಡುವೆಯೂ ಗೋಧಿ ಬೆಲೆಯಲ್ಲಿ ಏಕಾಏಕಿ 200 ರೂಪಾಯಿ ಇಳಿಕೆಯಾಗಿದೆ.
ಕಳೆದ ಹಲವು ದಿನಗಳಿಂದ ದೇಶಾದ್ಯಂತ ಗೋಧಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದರ ಹಿಂದೆ ರಷ್ಯಾ -ಉಕ್ರೇನ್ ಯುದ್ಧ (Russia Ukraine) ಕಾರಣ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ರಷ್ಯಾ-ಉಕ್ರೇನ್ (Russia Ukraine) ಯುದ್ಧದಿಂದ ಆಮದು ಬೇಡಿಕೆ ಹೆಚ್ಚಿದ ಕಾರಣ, ಗೋಧಿ ಬೆಲೆ ಏರಿಕೆ ಕಾಣುತ್ತಿದೆ, ಆದರೆ ಈ ಮಧ್ಯೆ, ಮಧ್ಯಪ್ರದೇಶದಲ್ಲಿ ಗೋಧಿ ಬೆಲೆಯಲ್ಲಿ ಏಕಾಏಕಿ 200 ಕ್ಕೂ ಹೆಚ್ಚು ಇಳಿಕೆಯಾಗಿದೆ ಎಂದು ವರದಿಗಳಾಗಿವೆ.
ಇದನ್ನೂ ಓದಿ: ಕೋಳಿ ಸಾಕಣೆಗೆ ಮುನ್ನ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವವು..?
ಗೋಧಿ ಬೆಲೆ ಏಕೆ ಕಡಿಮೆಯಾಯಿತು? ( Why did the price of wheat come down?)
ಮಧ್ಯಪ್ರದೇಶದಲ್ಲಿ, ಗೋಧಿ ಬೆಲೆಯಲ್ಲಿ ಈ ಹಂತದ ಕುಸಿತವು ಸುಮಾರು ಮೂರು ದಿನಗಳಿಂದ ಕಂಡುಬರುತ್ತಿದೆ. ವಾಸ್ತವವಾಗಿ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಮುಂದಿನ ಮೂರು ತಿಂಗಳವರೆಗೆ ಉಚಿತ ಪಡಿತರ ಯೋಜನೆಯಡಿ ಉಚಿತ ಪಡಿತರ ವಿತರಣೆಯ ಅವಧಿಯನ್ನು ವಿಸ್ತರಿಸಿದೆ. ಇದರ ನೇರ ಪರಿಣಾಮ ರಾಜ್ಯದ ಧಾನ್ಯ ಮಾರುಕಟ್ಟೆಗಳ ಮೇಲೆ ಕಾಣುತ್ತಿದೆ. ಇದರಿಂದ ಗೋಧಿ ಬೆಲೆ ಏಕಾಏಕಿ ಕುಸಿದಿದೆ. ಇದರ ಪರಿಣಾಮ ದೇಶದ ಬಂದರುಗಳಿಂದ ಹಿಡಿದು ರಾಜ್ಯದ ಮಂಡಿಗಳವರೆಗೂ ಕಾಣುತ್ತಿದೆ. ಈ ನಡುವೆ ಇದೀಗ ಸರ್ಕಾರಿ ಟೆಂಡರ್ ಹಾಗೂ ಹಳೆ ಗೋಧಿ ಮಾರಾಟವಾಗುತ್ತಿದ್ದು, ಇದರಿಂದ ಗೋಧಿ ಬೆಲೆಯೂ ಇಳಿಕೆಯಾಗಿದೆ ಎಂಬ ಸುದ್ದಿಯೂ ಬರುತ್ತಿದೆ. ಇದು ರಾಜ್ಯದ ಬಹುತೇಕ ಎಲ್ಲ ಧಾನ್ಯ ಮಾರುಕಟ್ಟೆಗಳ ಸ್ಥಿತಿ.
ಇದನ್ನೂ ಓದಿ: EPF ನ್ನು ಆನ್ಲೈನ್ನಲ್ಲಿ ವರ್ಗಾಯಿಸುವುದು ಹೇಗೆ? ಇಲ್ಲಿದೆ ಸರಳ ಪರಿಹಾರ
ಗೋಧಿ ಬೆಲೆ 200 ರೂ.ವರೆಗೆ ಇಳಿಕೆಯಾಗಿದೆ
ರಾಜ್ಯದ ಅತಿದೊಡ್ಡ ಮತ್ತು ಪ್ರಮುಖ ಗೋಧಿ ಮಾರುಕಟ್ಟೆ ಇಂದೋರ್ನಲ್ಲಿದೆ . ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆಗಳು ಯಾವುವು ಎಂದು ತಿಳಿಯೋಣ-
ಗಿರಣಿ ಗುಣಮಟ್ಟದ ಗೋಧಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರ ಬೆಲೆ 2050 (ಕ್ವಿಂಟಲ್ಗೆ ) ರಿಂದ 2100 ರೂ.ಗೆ ಇಳಿದಿದೆ.
ಇದನ್ನೂ ಓದಿ: ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಮಾಳವರಾಜ್ ಗೋಧಿ (Wheat) ತಳಿಯನ್ನು ಕ್ವಿಂಟಲ್ಗೆ 2000 ರಿಂದ 2100 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಪೂರ್ಣ ಗುಣಮಟ್ಟದ ಗೋಧಿಗೆ 150 ರೂ.ಗಳ ಕೊರತೆಯಿದ್ದು, ನಂತರ ಕ್ವಿಂಟಲ್ಗೆ (Quintal) 2,300 ರಿಂದ 2350 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: UAN ನಂಬರ್ ಇಲ್ಲದೆ EPF ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ..?
ಕಾಂಡ್ಲಾ ರಫ್ತುದಾರರು ಕೂಡ 200 ರೂ. ಇಳಿಕೆ ಮಾಡಿ 2340 ರೂ. ಭೋಪಾಲ್ನಲ್ಲಿ, TRIFED ನ ಸರಕುಗಳನ್ನು 2240 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ.
ಮಧ್ಯಪ್ರದೇಶದಲ್ಲಿ, ವಾರಗಳ ಹಿಂದೆ ಧಾನ್ಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆಗಳು ಹೆಚ್ಚಾಗುತ್ತಿದ್ದವು, ಈಗ ಅವು ಸಂಪೂರ್ಣವಾಗಿ ಇಳಿದಿವೆ. ಈ ಬಗ್ಗೆ ವರ್ತಕರು ಹೇಳುವ ಪ್ರಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ (Pradhan Mantri Garib Kalian)ಅವಧಿಯನ್ನು ಹೆಚ್ಚಿಸಿ ಮತ್ತೆ ಸರ್ಕಾರ ಟೆಂಡರ್ (Tender)ಮಾಡಿ ರಾಜ್ಯದಲ್ಲಿ ಹಳೆ ಗೋಧಿ (Old Wheat) ಮಾರಾಟ ಮಾಡುವುದೇ ಇದರ ಹಿಂದಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಬಂಪರ್ ಸುದ್ದಿ..ಹೆಚ್ಚಳವಾಗುತ್ತಾ HRA..?
Share your comments