1. ಸುದ್ದಿಗಳು

Aadhaar Card Fingerprint ಆಧಾರ್ ಕಾರ್ಡ್‌ನ ಬೆರಳಚ್ಚು ಡೇಟಾ ಏಕೆ Lock ಮಾಡಬೇಕು?

Hitesh
Hitesh
Why Secure Aadhaar Card Fingerprint Data?

ಆಧಾರ್‌ ಕಾರ್ಡ್‌ನ (Fingerprint of Aadhaar Card) ಬಯೋಮೆಟ್ರಿಕ್ಸ್‌ ಲಾಕ್‌ (Biometrics lock) ಮಾಡುವುದು ಇತ್ತೀಚಿನ ದಿನಗಳಲ್ಲಿ ಅತ್ಯಂತ ಮುಖ್ಯ ಕೆಲಸವಾಗಿದೆ. ಅದು ಯಾಕೆ ಎನ್ನುವ ವಿವರ ಇಲ್ಲಿದೆ.

Aadhaar Biometrics Lock ಆಧಾರ್ ಬಯೋಮೆಟ್ರಿಕ್ಸ್ ಲಾಕ್‌ ಮಾಡುವ ಸುಲಭ ವಿಧಾನ ಇಲ್ಲಿದೆ! 

ಆಧಾರ್‌ ಕಾರ್ಡ್‌ (Aadhaar card is my identity) ನನ್ನ ಗುರುತು ಎನ್ನುವ ಘೋಷಾವಾಕ್ಯವನ್ನು ನೀವೆಲ್ಲರೂ ಕೇಳಿಯೇ ಇರುತ್ತೀರ.

ಆದರೆ, ಇಂಥಹ ಬಹುಪಯೋಗಿ ಹಾಗೂ ಹಲವು ದಾಖಲೆಗಳಿಗೆ ಬಳಸುವ ಆಧಾರ್‌ ಕಾರ್ಡ್‌ನ ಬಯೋಮೆಟ್ರಿಕ್ಸ್‌ ಅಂದರೆ (ನಿಮ್ಮ ಕೈ ಬೆರಳ ಗುರುತನ್ನು)

ಬಳಸಿಕೊಂಡು ನಿಮ್ಮ ಖಾತೆಯಿಂದ ಹಣ ಕದಿಯುವ ಜಾಲವೊಂದು ಸದ್ದಿಲ್ಲದೆ ಕೆಲಸ ಮಾಡುತ್ತಿದೆ.

ಈಗಾಗಲೇ ಆಧಾರ್‌ ಕಾರ್ಡ್‌ (Use Aadhaar Card Biometrics) ಬಯೋಮೆಟ್ರಿಕ್ಸ್‌ ಬಳಸಿ

ಹಲವು ವಂಚಕರು ಜನರ ಖಾತೆಯಿಂದ ಹಣ ಲಪಟಾಯಿಸಿದ್ದಾರೆ.

ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ (Lock your Aadhaar biometrics) ಅನ್ನು ಲಾಕ್‌ ಮಾಡುವುದರಿಂದಾಗಿ ನಿಮ್ಮ ಗುರುತಿನ ಪರಿಶೀಲನೆ ಸೇರಿದಂತೆ

ಯಾವುದೇ ದಾಖಲೆಯಾಗಿ ಬಳಸುವುದಕ್ಕೂ ಯಾವುದೇ ಅಡೆತಡೆ ಉಂಟಾಗುವುದಿಲ್ಲ. ಇನ್ನೂ ಹೇಳಬೇಕೆಂದರೆ ನಿಮ್ಮ ಆಧಾರ್‌ ಕಾರ್ಡ್‌

ಬಯೋಮೆಟ್ರಿಕ್ಸ್‌ ಅನ್ನು ಅನ್‌ಲಾಕ್‌ ಮಾಡಬೇಕು ಎನ್ನುವ ಸಂದರ್ಭವೇನಾದರೂ ಎದುರಾದರೆ, 

Aadhaar Card Fraud: ಆಧಾರ್‌ ಕಾರ್ಡ್‌ ವಂಚನೆ: ನಿಮಗೇ ತಿಳಿಯದೆಯೇ ನಿಮ್ಮ ಖಾತೆಯಿಂದ ಹಣ ಖಾಲಿ!

ನಿಮ್ಮ ಗುರುತನ್ನು ದೃಢೀಕರಿಸಲು ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು OTP ಯನ್ನು ಬಳಸಿಕೊಳ್ಳಬಹುದು.

ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್ಸ್‌ (ಬೆರಳಿನ ಗುರುತು) ಸುರಕ್ಷಿಸುವುದರ ಉಪಯೋಗ ಇಲ್ಲಿದೆ.  

ಇದು ಸಂಭಾವ್ಯ AEPS ವಂಚನೆಗಳಿಂದ (Aadhaar Enabled Payment System)ನಿಮ್ಮ ಖಾತೆಯನ್ನು ರಕ್ಷಿಸುತ್ತದೆ.

ಇದರಿಂದ ನಿಮ್ಮ ಹಣ ಜೋಪಾನವಾಗಿ ಇರಲಿದೆ.  

ಇದು ನಿಮ್ಮ ಗುರುತನ್ನು ರಕ್ಷಿಸುವುದರೊಂದಿಗೆ ಹಣ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಮಾಡುತ್ತದೆ.  

ನಿಮ್ಮ ಬಯೋಮೆಟ್ರಿಕ್ ಡೇಟಾ ಸುರಕ್ಷಿತವಾಗಿದೆ ಅಲ್ಲದೇ ಯಾರೂ ಏನೂ ಮಾಡಲು

ಸಾಧ್ಯವಿಲ್ಲ ಎನ್ನುವ ವಿಶ್ವಾಸ ನಿಮ್ಮಲ್ಲಿ ಮೂಡುತ್ತದೆ. 

AEPS ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಈ ಶಿಫಾರಸುಗಳನ್ನು ಅನುಸರಿಸಿ

ಪ್ರತಿಷ್ಠಿತ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪ್ರತ್ಯೇಕವಾಗಿ ಎಟಿಎಂಗಳು ಮತ್ತು ಪಿಒಎಸ್ ಸಾಧನಗಳನ್ನು

ಬಳಸುವುದನ್ನು ರೂಢಿಸಿಕೊಳ್ಳಿ. ಹಣವನ್ನು ತೆಗೆಯುವಾಗ ಸುರಕ್ಷಾ ಮಾರ್ಗವನ್ನು ಅನುಸರಿಸಿ.

ನಿಮಗೆ ಸಂಪೂರ್ಣ ನಂಬಿಕೆಯಿಲ್ಲದ ವ್ಯಕ್ತಿಗಳಿಗೆ ನಿಮ್ಮ ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬೇಡಿ

ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ನು ನಿರ್ದಿಷ್ಟವಾಗಿ ಬಳಸಿಕೊಳ್ಳುವ ಅಗತ್ಯವಿಲ್ಲದಿದ್ದಲ್ಲಿ ಲಾಕ್ ಮಾಡಿದ  ಮಾದರಿಯಲ್ಲಿಯೇ ಬಳಸಿ.   

ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್ಸ್‌ ಲಾಕ್‌ ಮಾಡುವುದು ಹಾಗೂ ಅದರಿಂದ ಉಪಯೋಗಗಳು ಸೇರಿದಂತೆ ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು

ಕೃಷಿ ಜಾಗರಣ ಕನ್ನಡದಲ್ಲಿ ಈಗಾಗಲೇ ಹಲವು ಲೇಖನಗಳನ್ನು ಪ್ರಕಟಿಸಲಾಗಿದೆ. ಅಲ್ಲದೇ ಆಧಾರ್‌ ಕಾರ್ಡ್‌

ಬಯೋಮೆಟ್ರಿಕ್ಸ್‌ ಲಾಕ್‌ ಮಾಡುವುದು ಹೇಗೆ ಎನ್ನುವ ವಿವರವನ್ನೂ ಅದರಲ್ಲಿ ನೀಡಲಾಗಿದೆ.  

Published On: 19 October 2023, 05:01 PM English Summary: Why Secure Aadhaar Card Fingerprint Data?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.