1. ಸುದ್ದಿಗಳು

list of pulses ವಿಶ್ವ ಬೇಳೆಕಾಳು ದಿನ -2024, ಏನಿದರ ವಿಶೇಷ ?

Hitesh
Hitesh
ವಿಶ್ವ ಬೇಳೆಕಾಳು ದಿನ ವರ್ಷದ ವಿಶೇಷ ಇಲ್ಲಿದೆ

ಊಟ ಎಂದಾಕ್ಷಣ ನೆನಪಿಗೆ ಬರುವುದು ಅನ್ನ-ಸಾರು. ಸಾರು ಎಂದರೆ ಬೇಳೆ ಸಾರು.

ಬೇಳೆಕಾಳು ಅಷ್ಟರ ಮಟ್ಟಿಗೆ ನಮ್ಮ ಆಹಾರ ಪದ್ಧತಿಯ ಅವಿಭಾಜ್ಯ ಅಂಗ. ದ್ವಿದಳ ಧಾನ್ಯಗಳು / ಕಾಳುಗಳು ಎಂದೂ ಕರೆಯಲ್ಪಡುವ

ಬೇಳೆಕಾಳುಗಳು ಆಹಾರಕ್ಕಾಗಿ ಬೆಳೆದ ದ್ವಿದಳ ಧಾನ್ಯಗಳ (ಹಸಿರುಕಾಯಿ / ತರಕಾರಿಯಾಗಿ ಕೊಯ್ಲು ಮಾಡಿದ ಹಸಿರು ಬಟಾಣಿ ಮತ್ತು ಹಸಿರು

ಬೀನ್ಸ್ ಮತ್ತು ಪ್ರಾಥಮಿಕವಾಗಿ ಎಣ್ಣೆಯನ್ನು ತೆಗೆಯಲು ಬಳಸಲಾಗುವ ಸೋಯಾಬೀನ್ ಮತ್ತು ನೆಲಗಡಲೆನಂತ

ಹವುಗಳನ್ನು ಹೊರತುಪಡಿಸಿ) ಒಣ ಬೀಜಗಳಾಗಿವೆ.

ಬೇಳೆಕಾಳುಗಳು ವಿವಿಧ ಆಕಾರಗಳು, ಪ್ರಭೇದಗಳು, ಗಾತ್ರಗಳು ಮತ್ತು ಬಣ್ಣ ಹೊಂದಿವೆ ಮತ್ತು ಪ್ರಪಂಚದಾದ್ಯಂತ

ವಿವಿಧ ಭಕ್ಷ್ಯ ಮತ್ತು ಪಾಕಪದ್ಧತಿಗಳಲ್ಲಿ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಸೇವಿಸುವ ಬೇಳೆಕಾಳುಗಳಲ್ಲಿ ಒಣಗಿದ ಬೀನ್ಸ್, ಮಸೂರ ಮತ್ತು ಬಟಾಣಿ ಸೇರಿವೆ.

ಇವುಗಳ ಬೀಜಗಳು ನಾರಿನಂಶ (ಫೈಬರ್), ಸಸಾರಜನಕ, ಜೀವಸತ್ವ (ವಿಟಮಿನ್)ಗಳು ಮತ್ತು ಖನಿಜ (ಮಿನರಲ್ಸ್)ಗಳಂತಹ ಅಗತ್ಯ ಪೋಷಕಾಂಶಗಳ

ಆಗರವಾಗಿದ್ದು, ಅವುಗಳನ್ನು ಪ್ರಮುಖ ಮತ್ತು ಆರೋಗ್ಯಕರ ಸೂಪರ್‍ಫುಡ್‍ಗಳನ್ನಾಗಿ ಮಾಡುತ್ತದೆ. ಯುನೈಟೆಡ್ ನೇಷನ್ಸ್ ಫುಡ್ ಅಂಡ್ ಅಗ್ರಿಕಲ್ಚರಲ್

ಆರ್ಗನೈಸೇಶನ್ ಪ್ರಕಾರ ಹನ್ನೊಂದು ವಿಧದ ದ್ವಿದಳ ಧಾನ್ಯಗಳಿವೆ.

ಅವುಗಳೆಂದರೆ ಒಣ ಅವರೆಕಾಳು, ಒಣಗಿದ ಬೀನ್ಸ್,ಕಡಲೆ, ತೊಗರಿ, ಮಸೂರ, ಒಣ ಬ್ರಾಡ್ ಬೀನ್ಸ್,

ಬಂಬಾರಾ ಬೀನ್ಸ್, ಲುಪಿನ್, ವೆಚ್ ಮತ್ತು ಇತರೆ ಕಾಳುಗಳು. 

ಬೇಳೆಕಾಳುಗಳು ಏಕೆ

ಬೇಳೆಕಾಳುಗಳು ಬಹು ಕಾರಣಗಳಿಗಾಗಿ ಪ್ರಮುಖ ಬೆಳೆಗಳಾಗಿವೆ.

ಅವುಗಳೆಂದರೆ ಮಾನವನ ಆರೋಗ್ಯಕ್ಕೆ, ಸುಸ್ಥಿರ ಕೃಷಿಗೆ ಹಾಗೂ ಉತ್ತಮ ಪರಿಸರ ಮತ್ತು ವಾತಾವರಣ.

ಪೌಷ್ಟಿಕಾಂಶದ ಪ್ರಯೋಜನಗಳು:

ಹೆಚ್ಚಿನ ಸಸಾರಜನಕ ಅಂಶ: ಬೇಳೆಕಾಳುಗಳು ಸಸ್ಯ ಆಧಾರಿತ ಸಸಾರಜನಕದ ಅತ್ಯುತ್ತಮ ಮೂಲವಾಗಿದೆ.

ಅಂಗಾಂಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಅವಶ್ಯಕವಾಗಿದೆ. ಮಾಂಸ ಮತ್ತು ಹೈನುಗಾರಿಕೆ

ಉತ್ಪನ್ನಗಳು ಸುಲಭವಾಗಿ ಲಭ್ಯವಿಲ್ಲದ ಅಥವಾ ಬಡ ಪ್ರದೇಶಗಳಲ್ಲಿ ಅವು ವಿಶೇಷವಾಗಿ ಮುಖ್ಯವಾಗಿವೆ.

ನಾರಿನಂಶದಲ್ಲಿ (ಫೈಬರ್‌) ಸಮೃದ್ಧವಾಗಿದೆ: ಬೇಳೆಕಾಳುಗಳು ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಕರುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲ: ಕಾಳುಗಳು ಕಬ್ಬಿಣ, ಸತು ಮತ್ತು ಮೆಗ್ನೀಸಿಯಮ್ ಸೇರಿದಂತೆ

ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ.

ಸುಸ್ಥಿರ ಕೃಷಿ:

ಸಾರಜನಕ ಸ್ಥಿರೀಕರಣ: ಬೇಳೆಕಾಳುಗಳು ಸಾರಜನಕ ಸ್ಥಿರೀಕರಿಸುವ ಬೆಳೆಗಳಾಗಿವೆ.

ಅಂದರೆ ಅವು ವಾತಾವರಣದ ಸಾರಜನಕವನ್ನು ಸಸ್ಯಗಳಿಗೆ ಬಳಸಬಹುದಾದರೂಪಕ್ಕೆ ಪರಿವರ್ತಿಸಬಹುದು.

ಇದು ಪರಿಸರಕ್ಕೆ ಹಾನಿಕಾರಕ ಸಂಶ್ಲೇಷಿತ ರಸಗೊಬ್ಬರಗಳ ಅಗತ್ಯವನ್ನು ಕಡಿಮೆ ಮಾಡುತ್ತದೆ.

ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ: ಬೇಳೆಕಾಳುಗಳು ಮಣ್ಣಿನಲ್ಲಿ ಸಾವಯವ ಪದಾರ್ಥ ಮತ್ತು ಸಾರಜನಕವನ್ನು ಸೇರಿಸುವ

ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದು ಮಣ್ಣಿನ ಫಲವತ್ತತೆ ಮತ್ತು ಬೆಳೆ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ನೀರಿನ ಸಮರ್ಥ ಬಳಕೆ: ಬೇಳೆಕಾಳುಗಳಿಗೆ ಇತರ ಅನೇಕ ಬೆಳೆಗಳಿಗಿಂತ ಕಡಿಮೆ ನೀರು ಬೇಕಾಗುತ್ತದೆ.

ಅಂದರೆ ಒಂದು ಕಿ.ಗ್ರಾ. ಬೇಳೆಕಾಳುಗಳನ್ನು ಬೆಳೆಯಲು ಸರಿಸುಮಾರು 358 ಲೀಟರ್ ನೀರು ಸಾಕು.

ಸೀಮಿತ ನೀರಿನ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಅವುಗಳನ್ನು ಹೆಚ್ಚು ಸಮರ್ಥನೀಯ ಆಯ್ಕೆಯನ್ನಾಗಿ ಮಾಡುತ್ತದೆ.

ಆರ್ಥಿಕ ಪ್ರಯೋಜನಗಳು:

ಸಸಾರಜನಕದ ಕೈಗೆಟುಕುವ ಮೂಲ: ಬೇಳೆಕಾಳುಗಳು ಸಸಾರಜನಕದ ತುಲನಾತ್ಮಕವಾಗಿ ಅಗ್ಗದ

ಮೂಲವಾಗಿದ್ದು, ಎಲ್ಲಾ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಜನರಿಗೆ ಲಭ್ಯ.

ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ: ಸಸಾರಜನಕದ ಮತ್ತು ಇತರ ಪೋಷಕಾಂಶಗಳ ವಿಶ್ವಾಸಾರ್ಹ ಮೂಲವನ್ನು

ಒದಗಿಸುವ ಮೂಲಕ, ಬೇಳೆಕಾಳುಗಳು ಆಹಾರ ಭದ್ರತೆಯನ್ನು ಸುಧಾರಿಸಲು ಮತ್ತು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಣ್ಣ ಹಿಡುವಳಿದಾರ ರೈತರಿಗೆ ಬೆಂಬಲ: ಬೇಳೆಕಾಳುಗಳನ್ನು ಹೆಚ್ಚಾಗಿ ಸಣ್ಣ ಹಿಡುವಳಿದಾರರು ಬೆಳೆಯುತ್ತಾರೆ.

ಅವರಿಗೆ ಆದಾಯದ ಮೂಲ ಮತ್ತು ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ.

ಪರಿಸರ ಪ್ರಯೋಜನಗಳು:

ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ:

ಬೇಳೆಕಾಳುಗಳು ಮಾಂಸ ಮತ್ತು ಡೈರಿಗಳಂತಹ ಇತರ ಸಸಾರಜನಕದ ಮೂಲಗಳಿಗಿಂತ ಕಡಿಮೆ ಇಂಗಾಲದ ಹೆಜ್ಜೆಗುರುತನ್ನು ಹೊಂದಿವೆ.

ಜೀವವೈವಿಧ್ಯವನ್ನುಉತ್ತೇಜಿಸುತ್ತದೆ: ಬೇಳೆಕಾಳುಗಳನ್ನು ಇತರ ಬೆಳೆಗಳೊಂದಿಗೆ ಸರದಿಯಲ್ಲಿ ಬೆಳೆಯಬಹುದು.

ಇದು ಜೀವವೈವಿಧ್ಯ ಮತ್ತು ಮಣ್ಣಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತದೆ: ದ್ವಿದಳ ಧಾನ್ಯಗಳು ವ್ಯಾಪಕವಾದ ಹವಾಮಾನ ಪರಿಸ್ಥಿತಿಗಳನ್ನು ಸಹಿಸಿಕೊಳ್ಳಬಲ್ಲವಾಗಿವೆ.

ಇವುಗಳನ್ನು ಹವಾಮಾನಚತುರ ಬೆಳೆ ಎಂದು ಪರಿಗಣಿಸಲಾಗುತ್ತದೆ.  

ಒಟ್ಟಾರೆಯಾಗಿ, ದ್ವಿದಳ ಧಾನ್ಯಗಳು ವಿವಿಧ ಕಾರಣಗಳಿಗಾಗಿ ಪ್ರಮುಖ ಬೆಳೆಗಳಾಗಿವೆ.

ಅವು ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಸುಸ್ಥಿರ ಕೃಷಿಯನ್ನು ಉತ್ತೇಜಿಸುತ್ತವೆ.

ಆಹಾರ ಭದ್ರತೆಗೆಕೊಡುಗೆ ನೀಡುತ್ತವೆ ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ವಿಶ್ವ ಬೇಳೆಕಾಳು ದಿನವು ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಸುಸ್ಥಿರ ಆಹಾರ ಉತ್ಪಾದನೆಯ

ಭಾಗವಾಗಿ ಬೇಳೆಕಾಳುಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ.

ಡಿಸೆಂಬರ್ 20, 2013 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ವಿಶೇಷ ನಿರ್ಣಯವನ್ನು ಅಂತರರಾಷ್ಟ್ರೀಯ ಬೇಳೆಕಾಳುಗಳ ವರ್ಷವನ್ನಾಗಿ ಅಂಗೀಕರಿಸಿತು.

ನಂತರ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯು ಬುರ್ಕಿನಾ ಫಾಸೊರವರ ಪ್ರಸ್ತಾಪದಂತೆ ಡಿಸೆಂಬರ್ 20, 2018 ರಂದು, ವಿಶ್ವಸಂಸ್ಥೆಯುಂ/ಖಇS/73/251

ನಿರ್ಣಯವನ್ನು ದ್ವಿದಳ ಧಾನ್ಯಗಳ ಪೌಷ್ಟಿಕಾಂಶದ ಪ್ರಯೋಜನಗಳನ್ನು ಮತ್ತು ಸುಸ್ಥಿರ ಆಹಾರ ವ್ಯವಸ್ಥೆಗಳು ಮತ್ತು ವಿಶ್ವ

ಹಸಿವಿಗಾಗಿ ಅವರಕೊಡುಗೆಯನ್ನು ಅರಿವು ಮೂಡಿಸಲು ಪ್ರತಿ  ವರ್ಷ ಫೆಬ್ರವರಿ 10ಅನ್ನು ವಿಶ್ವ ಬೇಳೆಕಾಳು ದಿನವನ್ನಾಗಿಆಚರಿಸಲು ಸಮ್ಮತಿಸಿತು.

ಆಹಾರಉತ್ಪಾದನೆಯು ಮಣ್ಣಿನ ಮೇಲೆ ಅವಲಂಬಿತವಾಗಿದೆ. ಆರೋಗ್ಯಕರ ಮಣ್ಣು ಕೇವಲ ಆಹಾರ ಭದ್ರತೆಯ ಆಧಾರವನ್ನುಒದಗಿಸುವುದಿಲ್ಲ

ಆದರೆ, ಅಪೌಷ್ಟಿಕತೆ, ಕುಂಠಿತ ಬೆಳವಣಿಗೆ ಮತ್ತುರಕ್ತಹೀನತೆಯಂತಹ ಇತರ ಪೋಷಕಾಂಶಗ ಳ ಕೊರತೆ ಸಂಬಂಧಿತ ಅನಾರೋಗ್ಯವನ್ನು

ತಪ್ಪಿಸಲು ಅಗತ್ಯವಾದ ಪೋಷಕಾಂಶಗಳನ್ನು ಸಸ್ಯಾಹಾರಿಗಳಲ್ಲದೇ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಒದಗಿಸುತ್ತದೆ.

ಆದ್ದರಿಂದ, ಬೇಳೆಕಾಳುಗಳು ಮನುಕುಲಕ್ಕೆ ಆಹಾರವನ್ನು ನೀಡುವುದಲ್ಲದೆ ಇತರೆ ಬೆಳೆಗಳು ಮಣ್ಣಿನ ಸತ್ವ ಹೀರಿಕೊಂಡು ಬೆಳೆಯುತ್ತವೆಯಾದರೆ

ಇವು ಮಣ್ಣನ್ನು ಆರೋಗ್ಯಕರ ವಾಗಿರಿಸುತ್ತವೆ.

ಆದಕಾರಣ ಈ ವರ್ಷದ ಬೇಳೆಕಾಳು ದಿನಾಚರಣೆ “ದ್ವಿದಳ ಧಾನ್ಯಗಳು: ಮಣ್ಣು ಮತ್ತುಮಾನವರ ಪೋಷಣೆ” ಎಂಬ

ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವಬೇಳೆಕಾಳುದಿನದ ಮಹತ್ವ

ವಾರ್ಷಿಕವಾಗಿ ಫೆಬ್ರವರಿ 10ರಂದು ಆಚರಿಸಲಾಗುವ ವಿಶ್ವಬೇಳೆ ಕಾಳುದಿನವು ಹಲವಾರು ಕಾರಣಗಳಿಗಾಗಿ ಮಹತ್ತರವಾದ ಮಹತ್ವವನ್ನು ಹೊಂದಿದೆ.

ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವಗಮನಾರ್ಹವಾದ ಪೌಷ್ಟಿಕಾಂಶದ ಹೊರತಾಗಿಯೂ

ಬೇಳೆಕಾಳುಗಳನ್ನು ಸಾಮಾನ್ಯವಾಗಿ ಕಡೆಗಣಿಸಲಾಗುತ್ತದೆ. ವಿಶ್ವ ದ್ವಿದಳ ಧಾನ್ಯಗಳ ದಿನವು ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ತರುತ್ತದೆ.

ವಿಶ್ವಬೇಳೆ ಕಾಳುದಿನವು ನಮ್ಮಜೀವನದಲ್ಲಿ ಬೇಳೆಕಾಳುಗಳು ವಹಿಸುವ ಅಮೂಲ್ಯವಾದ ಪಾತ್ರದ ನಿರ್ಣಾಯಕಜ್ಞಾಪನೆ ಯಾಗಿಕಾರ್ಯನಿರ್ವಹಿಸುತ್ತದೆ.

ಆರೋಗ್ಯಕರ ಆಹಾರವನ್ನು ಉತ್ತೇಜಿಸುವಲ್ಲಿ ಮತ್ತು ಅಪೌಷ್ಟಿಕತೆಯನ್ನು ಎದುರಿಸುವಲ್ಲಿ ಮತ್ತು ವೈವಿಧ್ಯತೆಯನ್ನು

ಆಚರಿಸುವ ಮೂಲಕ, ಹೆಚ್ಚು ಸಮರ್ಥನೀಯ, ಆಹಾರ-ಸುರಕ್ಷಿತ ಮತ್ತು ಆರೋಗ್ಯಕರ ಭವಿಷ್ಯಕ್ಕೆಕೊಡುಗೆ ನೀಡಲು ದಿನವು ನಮ್ಮನ್ನು ಪ್ರೇರೇಪಿಸುತ್ತದೆ.

ಕಾಳು

ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸುವುದು

ದ್ವಿದಳ ಧಾನ್ಯಗಳು ಮತ್ತು ಸುಸ್ಥಿರ ಕೃಷಿ ಆಹಾರ ವ್ಯವಸ್ಥೆಯಲ್ಲಿ ಅವರು ವಹಿಸುವ ಪಾತ್ರದ ಬಗ್ಗೆ ಸಾರ್ವಜನಿಕರಲ್ಲಿಜಾಗೃತಿ ಮೂಡಿಸುವುದು,

ಸಾಮಾಜಿಕ ಮಾಧ್ಯಮದಲ್ಲಿ #WorldPulsesDay  ಹ್ಯಾಶ್‍ಟ್ಯಾಗ್ ಬಳಸುವ ಮೂಲಕ ಬೇಳೆಕಾಳುಗಳನ್ನು ಜನಪ್ರಿಯಗೊಳಿಸಬಹುದು.

ಜನರು ದ್ವಿದಳ ಧಾನ್ಯಗಳನ್ನು ಬೆಳೆಯಲು ಪ್ರೇರೇಪಿಸುವುದು. ಜನರು ತಮ್ಮ ಸ್ಥಳೀಯ ಬೀಜ ಬ್ಯಾಂಕ್‍ಗೆ ಬೇಳೆಕಾಳುಗಳನ್ನು ದಾನ ಮಾಡಬಹುದು

ಮತ್ತು ಬೇಳೆಕಾಳುಗಳನ್ನು ಉಡುಗೊರೆಯಾಗಿ ಕೊಡಬಹುದು ಅಥವಾ ಬೇಳೆಕಾಳುಗಳಿಂದ ತಯಾರಿಸಿದ ತಿಂಡಿ ತಿನಿಸುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು.

ಒಟ್ಟಾರೆ ರೈತರು ಅಧುನಿಕ ತಂತ್ರಜ್ಞಾನ / ತಾಂತ್ರಿಕತೆ ಬಳಸಿ ಬೇಳೆಕಾಳು ಬೆಳೆಗಳನ್ನು ಬೆಳೆಯುವುದರಿಂದ ದೇಶದ ಜನಸಾಮಾನ್ಯರಿಗೆ ಅಪೌಷ್ಟಿಕತೆ

ಹೋಗಲಾಡಿಸಿ, ಕೃಷಿಯನ್ನು ಲಾಭದಾಯಕ ಮಾಡುವುದರ ಜೊತೆಗೆ ಸುಸ್ಥಿರತೆಯನ್ನು ಕಾಪಾಡುವುದಲ್ಲದೇ ಜಾಗತಿಕ ತಾಪಮಾನವನ್ನು

ತಗ್ಗಿಸಿ ಪರಿಸರವನ್ನೂ ಸಂರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೈತರು ಮತ್ತು ಸಾರ್ವಜನಿಕರು ಬೇಳೆಕಾಳು ಬೆಳೆಯಲು ಮತ್ತು ಬಳಕೆ

ಮಾಡಲು ಕಾರ್ಯೋನ್ಮುಖರಾಗಲು ಇದು ಸಕಾಲ.

ಲೇಖಕರು: ಡಾ. ಅತೀಕ್ ಉರ್ ರೆಹಮಾನ್, ಹೆಚ್. ಎಂ. ಡಾ. ಲೋಹಿತಾಶ್ವ, ಹೆಚ್.ಸಿ., ಕೇಶವರೆಡ್ಡಿ, ಜಿ ಮತ್ತು

ಎ.ಎಸ್. ಪದ್ಮಜ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು. 

Published On: 31 January 2024, 10:55 AM English Summary: World Pulses Day -2024, What's Special?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.