ಸತತ ಶುಂಠಿ ಧಾರಣೆ ಕುಸಿತವಾದ ಹಿನ್ನೆಲೆಯಲ್ಲಿ ಸಾಲದ ಬಾಧೆಗೆ ಸಿಲುಕಿದ ರೈತನೋರ್ವ(Farmer) ಆತ್ಮಹತ್ಯೆ (Young farmer commits suicide) ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯಲ್ಲಿ ಇಂದು (ಭಾನುವಾರ) ನಡೆದಿದೆ. ಬಸವಾಪುರ ಗ್ರಾಮದ ವಸಂತ (34) ಎಂಬ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.
ಕಳೆದ ಐದು ವರ್ಷಗಳಿಂದ ಜಾಗ ಬಾಡಿಗೆ ಪಡೆದು ಶುಂಠಿ ಬೆಳೆ ಹಾಕಿದ್ದ ಮೃತ ವಸಂತ. ಸತತ ಮೂರು ವರ್ಷಗಳಿಂದ ಶುಂಠಿ (Ginger) ಧಾರಣೆ ಕುಸಿತಗೊಂಡಿದ್ದರಿಂದ ತೀವ್ರ ಸಂಕಷ್ಟಗೊಳಗಾಗಿದ್ದರು. ಆದರೆ, ನಷ್ಟದಲ್ಲಿದ್ದ ರೈತ ವಸಂತ ಸಂಘ ಸಂಸ್ಥೆ ಹಾಗೂ ಇತರೆ ಕೈಗಡ ಸೇರಿದಂತೆ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿರಿ:
ಕರ್ನಾಟಕದ ಹಲವೆಡೆ ಮಳೆ; ಸಿಡಿಲು ಬಡಿದು ಸಾವು!
ಸಾಲಗಾರರ ಕಾಟಕ್ಕೆ ಹೆದರಿ ಕೋಟೆತಾರಿಗಾ ಗ್ರಾಮದ ಹಿಂಡ್ಲೆಮನೆ ರಸ್ತೆಯ ಪಕ್ಕದ ಕಾಡಿನಲ್ಲಿ ಕಳೆನಾಶಕ ಕುಡಿದು ರೈತ ವಸಂತ ಸಾವನ್ನಪ್ಪಿದ್ದಾನೆ (Young farmer commits suicide). ಈ ಸಂಬಂಧ ರಿಪ್ಪನ್ ಪೇಟೆ ಪೋಲಿಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡುವಂತೆ ಹೈಕೋರ್ಟ್ ಸೂಚನೆ
Share your comments