ಈಗಿನ ಕಾಲದಲ್ಲಿ ಬಹುತೇಕ ಯುವಕರು ಹಾಗೂ ಜನರು ಕೃಷಿಯಲ್ಲಿ ನಿರಾಸಕ್ತಿ ತೋರುತ್ತಿರುವುದು ಒಂದುಕಡೆಯಾದರೆ ಕೆಲಜನರು ಕೃಷಿಯಲ್ಲಿ ಉತ್ತಮ ಆದಾಯ ಮತ್ತು ನೆಮ್ಮದಿ ಕಂಡುಕೊಂಡು, ಜೀವನದಲ್ಲಿ ಕೃಷಿಯ ಸಹಾಯದಿಂದ ಸಾಧಿಸಬಹುದು ಎಂದು ತೋರಿಸಿ ಕೊಟ್ಟವರಲ್ಲಿ ಪ್ರಭಾಕರ್ ಮಯ್ಯ ಅವರು ನೇರ ನಿದರ್ಶನವಾಗಿದ್ದಾರೆ. ಈಗಿನ ಕಾಲದಲ್ಲಿ ಸಾವಯವ ಕೃಷಿಯು ಒಂದು ಉತ್ತಮ ಪ್ರವೃತ್ತಿ ಯಾಗಿದ್ದು ಇಂತಹ ಸಾವಯವ ಕೃಷಿಯನ್ನು ಅಳವಡಿಸಿಕೊಂಡು ಸಾಧಿಸಿದವರಲ್ಲಿ ಪ್ರಭಾಕರ್ ಮಯ್ಯ ಅವರು ಒಬ್ಬರು . ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಸುರ್ಯ ದಲ್ಲಿ ಪ್ರಗತಿಪರ ಸಾವಯುವ ಕೃಷಿಕ ಪ್ರಭಾಕರ ಮಯ್ಯ .
ಬಿ. ಎ. ಎ. ಎ ಡ್. ವ್ಯಾಸಂಗ ಮಾಡಿರುವ ಪ್ರಭಾಕರ್ ಮಯ್ಯರವರು ಕೆಲ ವರ್ಷಗಳ ಕಾಲ ಗೌರವ ಶಿಕ್ಷಕರಾಗಿ ಸ್ಥಳೀಯ ಪ್ರೌಢಶಾಲೆಯಲ್ಲಿ ಸ್ವಯಿಚ್ಛೆಯಿಂದ ಸಂಬಳವಿಲ್ಲದೆ ಸೇವೆ ಸಲ್ಲಿಸಿದರು ಮುಂದೆ ಶಿಕ್ಷಕ ವೃತ್ತಿಯನ್ನು ತ್ಯಜಿಸಿ ಆದರ್ಶ ಬದುಕು ನಡೆಸಬೇಕು ಎಂದು ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು .
ಇವರದ್ದು ಒಟ್ಟು ಐದು ಎಕರೆ ಸಾವಯವ ಕೃಷಿ ಭೂಮಿಯನ್ನು ನಡ ಗ್ರಾಮದಲ್ಲಿ ಕಾಣಬಹುದಾಗಿದೆ . ನೀರಿಲ್ಲದ ಮರಳುಮಿಶ್ರಿತ ಭೂಮಿ ಇದಾಗಿದ್ದು . ಇವರದ್ದು ಅವಿಭಕ್ತ ಕುಟುಂಬ ಮನೆಯಲ್ಲಿ ಹತ್ತು ಮಂದಿ ಸದಸ್ಯರಿದ್ದಾರೆ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ . ಇವರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ . ಒಂದೇ ಬೆಳೆಯನ್ನು ಅವಲಂಬಿಸದೆ, ಇರುವ ಜಾಗದಲ್ಲಿ ಮಿಶ್ರ ಬೆಳೆಯನ್ನು ಮಾಡುತ್ತಿದ್ದಾರೆ . ಇವರು ತಮ್ಮ ಜಮೀನಿನಲ್ಲಿ ಭತ್ತ ತೆಂಗು ಅಡಿಕೆ ಕಾಫಿ ಕಾಳುಮೆಣಸು ಜಾಯಿಕಾಯಿ ತರಕಾರಿಗಳನ್ನು ಬೆಳೆಗಳನ್ನು ಬೆಳೆಯುತ್ತಿದ್ದಾರೆ . ವಿಶೇಷವೇನೆಂದರೆ ಎಲ್ಲವೂ ಸಹ ಸಾವಯುವ ಪದ್ಧತಿಯಲ್ಲೆ.
ಇವರ ಕೃಷಿಭೂಮಿಯು ಮಣ್ಣು ಮರಳು ಮಿಶ್ರಿತ ವಾಗಿದ್ದು ಈ ಮಣ್ಣಿನಲ್ಲಿ ಬೆಳೆ ತೆಗೆಯುವುದು ಅಷ್ಟು ಸುಲಭವಲ್ಲ, ಇದನ್ನು ಮನಗಂಡ ಇವರು ಮಣ್ಣಿನಲ್ಲಿ ಇರುವ ಕೊರತೆಯನ್ನು ನೀಗಿಸಲು ಪ್ರಾರಂಭದಿಂದಲೇ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ . ಅದಕ್ಕಾಗಿ ಹೈನುಗಾರಿಕೆ ಎರೆಹುಳು ಗೊಬ್ಬರ ತಯಾರಿಕೆ ಕೋಳಿ ಸಾಕಾಣಿಕೆ ಆಡು ಸಾಕಾಣಿಕೆ ಜೇನು ಸಾಕಾಣಿಕೆ ಕಾಂಪೋಸ್ಟ್ ಗೊಬ್ಬರ. ತಯಾರಿಕಾ ಘಟಕ . ಅಜೋಲಾ ,ಜೀವಾಮೃತ ತಯಾರಿಕೆ ಪಂಚಗವ್ಯ ತಯಾರಿಕೆ , ಹೀಗೆ ಹಲವಾರು ಕ್ರಮಗಳನ್ನು ಅನುಸರಿಸುತ್ತಿದ್ದಾರೆ.
ಇವರು ಕೃಷಿ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ,15 ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಇವರ ಕೃಷಿ ಕ್ಷೇತ್ರಕ್ಕೆ 400ಕ್ಕೂ ಹೆಚ್ಚು ರೈತರ ತಂಡಗಳು ಭೇಟಿ ನೀಡಿವೆ , ಇವರು 530ಕ್ಕೂ ಹೆಚ್ಚು ಕಡೆ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕೃಷಿ ಅನುಭವವನ್ನು ಹಂಚಿಕೊಂಡಿದ್ದಾರೆ . ಇವರ ಕೃಷಿ ಕ್ಷೇತ್ರಕ್ಕೆ ವಿಜ್ಞಾನಿಗಳು ಅಧಿಕಾರಿಗಳು ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ.
ಬೆಳೆಗಳು: ಇವರ ಐದು ಎಕರೆ ಕೃಷಿ ಭೂಮಿಯಲ್ಲಿ ಭತ್ತ ತೆಂಗು ಅಡಿಕೆ ಕಾಫಿ ಕಾಳುಮೆಣಸು ಜಾಯಿಕಾಯಿ ತರಕಾರಿ ಮೇವಿನ ಬೆಳೆಗಳು ಹೀಗೆ ಹಲವಾರು ಬೆಳೆಗಳನ್ನು ಬೆಳೆದಿದ್ದಾರೆ .
ಅಡಿಕೆ: ಇವರು ಮಂಗಳ ಶ್ರೀ ಮಂಗಳ ಶತಮಂಗಳ ಮೋಹಿತ್ನಗರ್ ಮುಂತಾದ ತಳಿಗಳನ್ನು ಇವರ ತೋಟದಲ್ಲಿ ನೋಡಬಹುದಾಗಿದೆ.
ಕೊಕ್ಕೊ : ಇವರು ಕ್ರಿಯಲ್ಲೋ . ಫಾರೆಸ್ಟಿರೊ. ತಳಿಗಳನ್ನು ಬೆಳೆದಿದ್ದಾರೆ.
ಇವರ ಕಾಫಿತೋಟದಲ್ಲಿ ರೋಬಸ್ಟಾ ಚಂದ್ರಗಿರಿ ಕಾವೇರಿ ಇಂತಹ ತಳಿಗಳನ್ನು ನೋಡಬಹುದಾಗಿದೆ. ತೆಂಗಿನಲ್ಲಿ ಸಿಓಡಿ. ಮಲಬಾರ್ ಆರೆಂಜ್ ಡ್ವಾರ್ಫ್ ತಳಿಗಳ ಮರವನ್ನು ನೋಡಬಹುದಾಗಿದೆ.
ಭತ್ತವನ್ನು ಒಂದು ಎಕರೆ ಭೂಮಿಯಲ್ಲಿ ಬೆಳೆದಿದ್ದು ಸೈಯಾದ್ರಿ ಪಂಚಮುಖಿ ಜಯ ಮುಂತಾದ ತಳಿಗಳನ್ನು ಬೆಳೆಯುತ್ತಿದ್ದಾರೆ . ಕರಿಮೆಣಸು ಬೆಳೆಯುವಲ್ಲಿ ಪನಿಯೂರು ಒಂದು ಮತ್ತು ಪನಿಯೂರು 3 ತಳಿಗಳನ್ನು ಬೆಳೆದಿದ್ದಾರೆ.
ತರಕಾರಿಯಲ್ಲಿ ಹಾಲು ಬದನೆ ಬೆಳೆದಿದ್ದು . ಇದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು ಒಂದು ಕಿಲೋಗ್ರಾಂ ಗೆ ರೂ 150 ಎಷ್ಟು ದೊರೆಯುತ್ತದೆ. ಬಾಳೆಯಲ್ಲಿ ನೇಂದ್ರನ್, ಕದಲಿ ತಳಿ. ಹಾಗೂ ಮಾವಿನಲ್ಲಿ ಮಲ್ಲಿಕಾ ತಳಿಯನ್ನು ಬೆಳೆದಿದ್ದಾರೆ . ಕೃಷಿ ಭೂಮಿಯಲ್ಲಿ ಹಲವಾರು ಕಡೆ ಸಾಗುವಾನಿ ಮಹಾಗನಿ ಇಂತಹ ಮರಗಳನ್ನು ಬೆಳೆಸುತ್ತಿದ್ದಾರೆ.
ಗೊಬ್ಬರ: ಇವರು ತಮ್ಮ ಕೃಷಿ ತೋಟದಲ್ಲಿ ನೆಟ್ಟಿರುವ ಸಾಗವಾನಿ ಮಹಾಗನಿ ಕೊಕ್ಕೋ ಇಂತಹ ಮರಗಳಿಂದ ಉದುರುವ ಎಲೆಗಳಿಂದ ಹಸಿರು ಗೊಬ್ಬರವನ್ನು ತಯಾರಿಸುತ್ತಾರೆ .
ಇವರು ಸಾಕಿರುವ 8 ಹಸುಗಳಿಂದ ಬರುವ ಸಗಣಿಯ ಸಹಾಯದಿಂದ ಸಾವಯುವ ಗೊಬ್ಬರವನ್ನು ತಯಾರಿಸುತ್ತಾರೆ . ಇದರ ಜೊತೆಗೆ ಹೆಚ್ಚಾಗಿ ತಮ್ಮ ಕೃಷಿಭೂಮಿಗೆ ಪೊಟಾಶಿಯಂ ಗೊಬ್ಬರವನ್ನು ಬಳಸುತ್ತಾರೆ ಹಾಗೂ ಬೇವಿನ ಹಿಂಡಿ ಹಾಗೂ ಕ್ಯಾಸ್ಟರ್ ಕೇಕ್ ಅನ್ನು ಬಳಸುತ್ತಾರೆ.
ಕೀಟನಾಶಕಗಳು: ಇವರು ತಮ್ಮ ಕೃಷಿ ಭೂಮಿಗೆ ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಬಳಸುವುದಿಲ್ಲ .
ಬದಲಿಗೆ ಇವರು ಮೋಹಕ ಬಲೆಗಳು ಹಾಗೂ ಜೀವಾಮೃತ ಇಂತಹ ಜೈವಿಕ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಇದರ ಮುಖಾಂತರ ಕೀಟಗಳನ್ನು ನಾಶ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಶಸ್ತಿಗಳು
ಇವರನ್ನು ರಾಜ್ಯದ 35 ಸಂಘ-ಸಂಸ್ಥೆಗಳು ಗುರುತಿಸಿ ಸನ್ಮಾನಿಸಿವೆ ಇವರ ಈ ಕಾರ್ಯಗಳನ್ನು ಗುರುತಿಸಿ ಹಲವಾರು ಸರಕಾರ ಮತ್ತು ಸಂಸ್ಥೆಗಳು ಕೃಷಿ ವಿಶ್ವವಿದ್ಯಾಲಯಗಳು ಪ್ರಶಸ್ತಿ ನೀಡಿವೆ . ಇವರಿಗೆ ತಾಲೂಕು ಮಟ್ಟದಲ್ಲಿ ಸಾಧನ ಶ್ರೀ ಪ್ರಶಸ್ತಿ, ಜಿಕೆವಿಕೆ ಬೆಂಗಳೂರು ಇವರಿಂದ ಪ್ರಗತಿಶೀಲ ಪ್ರಶಸ್ತಿ , ಸಿಪಿಸಿಆರ್ ಕಾಸರಗೋಡು ಕೇರಳ ಇವರಿಂದ ಉತ್ತಮ ಅಡಿಕೆ ಬೆಳೆಗಾರ ಪ್ರಶಸ್ತಿ , ಗುಜರಾತ್ ಸರಕಾರ ಮೋದಿ ಅವರಿಂದ ಶ್ರೇಷ್ಠ ಕಿಸಾನ್ ಪುರಸ್ಕಾರ , ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಪ್ರಗತಿಪರ ರೈತ ಪ್ರಶಸ್ತಿ. ಹೀಗೆ ಇವರೊಬ್ಬ ಪ್ರಗತಿಪರ ಕೃಷಿಕರು. ಮತ್ತು ಸಾವಯುವ ಕೃಷಿಕರು ಮತ್ತು ಸಾವಯುವ ಕೃಷಿ ಸಾಧಕ ರೈತ ಪ್ರಶಸ್ತಿಯನ್ನು ಆರ್ಟ್ ಆಫ್ ಲೀವಿಂಗ್ ನ ರವಿಶಂಕರ್ ಗುರೂಜಿಯವರಿಂದ ಪಡೆದಿದ್ದಾರೆ . 2015ರಲ್ಲಿ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ರೈತ ಪ್ರಶಸ್ತಿ 2016ರಲ್ಲಿ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆ ಭಾರತ ಸರ್ಕಾರ ಇವರಿಂದ ರಾಷ್ಟ್ರಮಟ್ಟದ ಇನೋವೇಟಿವ್ ಕೃಷಿಕ ಪ್ರಶಸ್ತಿ , 2016ರಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ . 2020ರಲ್ಲಿ ವಿಕೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಲಭಿಸಿದೆ,
ಈ ಮೇಲೆ ತಿಳಿದಿರುವಂತೆ ಪ್ರಭಾಕರ್ ರೈ ಅವರು ಯಾವುದೇ ರಾಸಾಯನಿಕಗಳ ಸಹಾಯವಿಲ್ಲದೆ ಅತ್ಯುತ್ತಮವಾಗಿ ಕೃಷಿಯನ್ನು ನಡೆಸಿ ಒಬ್ಬ ಆದರ್ಶದಾಯಕವಾದ ಕೃಷಿಕ ಎಂದು ಹೇಳುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ . ಅತಿ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಿಕೊಂಡು ಸಾವಯವ ಕೃಷಿಗೆ ಆದ್ಯತೆ ನೀಡಿ ಜೀವನದಲ್ಲಿ ಸಾಧಿಸಿದವರಲ್ಲಿ ಇವರು ಒಬ್ಬರು . ಅವರ ಸಾವಯುವ ಕೃಷಿ ಪದ್ಧತಿ ಕೃಷಿಯಲ್ಲಿ ಪ್ರವೃತ್ತಿ ಹೊಂದಿರುವ ಕೃಷಿಕರು ಮತ್ತು ಯುವಜನತೆಗೆ ಇದು ಮಾದರಿಯಾಗಿದೆ.
ಲೇಖನ: ಅನುಷ, ಎಸ್,ಆರ್. ಬಿಎಸ್ಸಿ (ತೋ), ಅಂತಿಮ ವರ್ಷದ ವಿದ್ಯಾರ್ಥಿನಿ ತೋಟಗಾರಿಕೆ ಮಹಾವಿದ್ಯಾಲಯ,ಮೂಡಿಗೆರೆ.
Share your comments